ಆರೋಗ್ಯ / HEALTH

ಲಾಕ್ ಡೌನ್ ಸಡಲಿಕೆ ನಂತ್ರ ಹೋಟೆಲ್ ಉದ್ಯಮಿಗಳಲ್ಲಿ ಆತಂಕ..

Published

on

ಹುಬ್ಬಳ್ಳಿ: ಕೊರೊನಾ ಲಾಕ್ ಡೌನನಿಂದಾಗಿ ಹೋಟೆಲ್ ಉದ್ಯಮ ನೆಲಕಚ್ಚುವ ಸ್ಥಿತಿಗೆ ತಲುಪಿದ್ದು,ದಿನಕ್ಕೆ ಸಾವಿರಾರು ರೂಪಾಯಿ ಲಾಭ ಪಡೆಯುತ್ತಿದ್ದ ಮಾಲೀಕರು ಈಗ ಹೋಟೆಲ್ ಬಿಜಿನೆಸ್ ಮಾಡಬೇಕು ಅಥವಾ ಬಿಡಬೇಕು ಅನ್ನೋ ಚಿಂತನೆ ನಡೆಸಿದ್ದಾರೆ.
ಹೌದು,ಹೋಟೇಲ್ ಉದ್ಯಮಕ್ಕೆ ಕೋರೊನಾ ಪೆಟ್ಟು ಭಾರಿ ಬಿದ್ದಂತಾಗಿದೆ ಇನ್ನೂ ಉದ್ಯಮ ಮೇಲೆಳವುದು ಕಷ್ಟ ಕೊರೊನಾ ವೈರಸ್ ಭೀತಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿAದ ಉದ್ಯಮ ಸಂಪೂರ್ಣ ಬಂದ್ ಆಗಿದ್ದು,ಹೋಟೆಲ್ ಉದ್ಯಮ ಮತ್ತೆ ತಲೆ ಎತ್ತಿ ನಿಲ್ಲಬೇಕಾದರೇ ಕನಿಷ್ಠ ಪಕ್ಷ ಎರಡು ವರ್ಷವಾದರೂ ಬೇಕಾಗಬಹುದು.
ಇನ್ನೂ ಜನರಲ್ಲಿ ಸೋಂಕು ಹರಡುವ ಆತಂಕ ಇದ್ದು,ಇದರಿಂದ ಸುಮಾರು ೧ ವರ್ಷದವರೆಗೂ ಜನರು ಹೋಟೆಲ್‌ಗಳತ್ತ ಧಾವಿಸುವುದು ಹೊರಗೆ ತಿನ್ನುವ ಹವ್ಯಾಸದಿಂದ ಸ್ವಲ್ಪ ದೂರವಾಗಲಿದ್ದಾರೆ. ಇದರಿಂದ ಹೋಟೆಲ್ ಉದ್ಯಮ ಪುನಶ್ಚೇತನ ಗೊಳ್ಳುವುದು ತುಂಬಾ ಕಷ್ಟ ಕರವಾಗಿದೆ.
ಹೋಟೆಲ್ ಉದ್ಯಮ ಸಂಕಷ್ಟ ಕ್ಕೆ ಸಿಲುಕಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉದ್ಯಮ ಉತ್ತೇಜನಕ್ಕೆ ಯಾವುದೇ ಪರಿಹಾರದ ಬಗ್ಗೆ ಮಾತನಾಡದೇ ಇರುವುದು ಉದ್ಯಮದವರ ನೋವಾಗಿದೆ.ಹೋಟೆಲ್ ಉದ್ಯಮದಿಂದ ರೈತರು ದವಸ ಧಾನ್ಯ ಹಾಲು ಸೇರಿದಂತೆ ಒಂದೊಕ್ಕೊAದು ಸರಪಳಿ ತರಹ ಬೆಸೆದುಕೊಂಡಿರುತ್ತದೆ.ಆದರೆ ಇದೀಗ ಕೊರೊನಾ ವೈರಸನಿಂದ ಇಡೀ ಸರಪಳಿ ಕಳಚಿ ಬಿದ್ದಂತಾಗಿದೆ.
ಹೋಟೆಲ್ ಉದ್ಯಮದವರು ರೈತರೊಂದಿಗೆ ನೇರ ಸಂಪರ್ಕ ಹೊಂದಿ ಬೆಳೆ ಖರೀಸುತ್ತಿದ್ದರು.ಆದರೆ ಇದೀಗ ಎಲ್ಲವೂ ಸ್ಥಗಿತಗೊಂಡಿದೆ ಕೆಲವು ಹೋಟೆಲ್ ಉದ್ಯಮದವರು ಕಿರಾಣಿ ವ್ಯಾಪಾರಿಗಳೊಂದಿಗೆ ಸಗಟು ವ್ಯಾಪಾರ ಇಟ್ಟುಕೊಂಡಿದ್ದರು.ಇದು ಕೂಡಾ ಸ್ಥಗಿತವಾಗಿದೆ.
ಅದೇ ರೀತಿ ಇನ್ನಿತರ ಸಂಪರ್ಕಗಳು ತಪ್ಪಿದಂತಾಗಿದೆ.
ನಗರದಲ್ಲಿ ನೂರಾರು ಹೋಟೆಲ್‌ಗಳನ್ನು ಕೊರೊನಾ ವೈರಸ ಲಾಕ್‌ಡೌನ್‌ನಿಂದ ಎಲ್ಲವೂ ಬಂದ್ ಆಗಿದೆ.ಆದರೆ ಹೋಟೆಲ್‌ಗಳ ಬಾಡಿಗೆ ಮಾತ್ರ ಸ್ಥಗಿತವಾಗಿಲ್ಲ.ಹೋಟೆಲ್ ಮಾಲೀಕರಿಗೆ ಪ್ರತಿ ತಿಂಗಳು ಬಾಡಿಗೆ ನೀಡಲೇಬೇಕು. ಕೆಲವೂಂದು ಕುಟುಂಬಗಳು ಹೋಟೆಲ್ ಬರುವ ಬಾಡಿಗೆಯನ್ನೆ ನೆಚ್ಚಿಕೊಂಡು ಕುಳಿತಿದೆ.
ಇನ್ನು ಸರ್ಕಾರ ಬಾಡಿಗೆದಾರರಿಂದ ಬಾಡಿಗೆ ಪಡೆಯಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.ಆದರೆ ನಾವು ಬಾಡಿಗೆ ಕಟ್ಟಿಲ್ಲವೆಂದ್ರೇ ಇಷ್ಟು ವರ್ಷಗಳಿಂದ ನಮ್ಮ ಅವರ ಜೀವನ ನಡೆಸಿದ್ದ ಹೋಟೆಲ್ ಹಾಗೂ ನಮ್ಮಲ್ಲಿರುವ ಬಾಂದವ್ಯ ಪ್ರೀತಿ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಅವರ ಅನಿಸಿಕೆ.
ಅಷ್ಟೇ ಅಲ್ಲದೆ ಈಗ ಲಾಕ್‌ಡೌನ್ ಸಡಲಿಕೆ ಆದ್ರೂ ಸಹ ಕೋರೊನಾ ಭಯ ಜನರಲ್ಲಿ ಹೋಗಿಲ್ಲ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿದೆ.ಆದ್ದರಿಂದ ದಿನಕ್ಕೆ ಸಾವಿರಾರು ರೂಪಾಯಿಗಳಿಸುತಿದ್ದ ಹೋಟೆಲ್ ಮಾಲೀಕರು ಈಗ ದಿನಕ್ಕೆ ಖರ್ಚು ಸಹ ಮರಳಿ ಬರತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ಇನ್ನೂ ಇದ್ದ ಕಾರ್ಮಿಕರು ಸಹ ತಮ್ಮ ಊರಿಗೆ ಹೋಗಿದ್ದರಿಂದ ಮತ್ತಷ್ಟು ಹೋಟೆಲ್ ಮಾಲೀಕರಲ್ಲಿ ಆತಂಕ ಮೂಡಿದೆ.ಕೂಡಲೇ ಸರಕಾರ ಹೋಟೆಲ್ ರೆಸ್ಟೋರೆಂಟ್ ನಂಬಿ ಜೀವನ ಮಾಡುತ್ತಿರುವ ಕುಟುಂಬಗಳಿಗೆ ಸ್ಪೆಷಲ್ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version