ಆರೋಗ್ಯ / HEALTH

ಆಟೋ ಚಾಲಕರು, ಆಶಾ ಕಾರ್ಯಕರ್ತೆಯರ ನೆರವಿಗೆ ಬಂದ ಡಾಕ್ಟರ್..

Published

on

ಶಿರಾ(ತುಮಕೂರು):ದೇಶವೇ ಲಾಕ್‌ಡೌನ್ ಆದ ಬಳಿಕ ಕೋಟ್ಯಂತರ ಜನರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ.
ಅದರಲ್ಲಿ ಆಟೋ ಚಾಲಕರ ಸ್ಥಿತಿಯೋ ಗಂಭೀರವಾಗಿದೆ.ಇದನ್ನು ಮನಗಂಡ ದಾನಿಯೊಬ್ಬರು ಆಟೋ ಚಾಲಕರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಲಕ್ಷಾಂತರ ರೂಪಾಯಿ ಮೌಲದ್ಯದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಸಹಾಯ ಮಾಡಿದ್ದಾರೆ.
ಅಂದ ಹಾಗೇ ಬೆಂಗಳೂರಿನ ವಿಕಿರಣ ಶಾಸ್ತ್ರಜ್ಞ ಡಾ.ಸಿಎಂ.ರಾಜೇಶ್ ಗೌಡ ಶಿರಾ ತಾಲ್ಲೂಕಿನ ಚಿರತಹಳ್ಳಿ ಗ್ರಾಮದವರಾಗಿದ್ದು,ತನ್ನ ತಾಲ್ಲೂಕಿನ ಜನರ ಸೇವೆ ಸಲ್ಲಿಸಿದ್ದಾರೆ.
ಸದ್ಯ ಕೊರೊನಾದಿಂದ ತಮ್ಮ ತಾಲ್ಲೂಕಿನ ಜನರ ನೆರವಿಗೆ ಧಾವಿಸಿದ್ದಾರೆ.ತೀವ್ರ ಸಮಸ್ಯೆಗೆ ಸಿಲುಕಿರುವಂತಹ ಆಟೋ ಚಾಲಕರಿಗೆ ರಾಜೇಶ್ ಗೌಡ ಆಹಾರ ಪದಾರ್ಥಗಳ ಕಿಟ್‌ನ್ನು ವಿತರಣೆ ಮಾಡಿದ್ದಾರೆ.ಜೊತೆಗೆ ಕಳೆದ ವಾರ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಗಾಯಗೊಂಡ ಆಟೋ ಚಾಲಕನಿಗೆ ವೈದ್ಯಕೀಯ ಚಿಕಿತ್ಸೆಯನ್ನು ಕೂಡ ನೀಡಿದ್ದಾರೆ.ಅಲ್ಲದೆ, ಆಶಾ ಕಾರ್ಯಕತೆಯರಿಗೂ ದಿನಸಿ ವಿತರಣೆ ಮಾಡಿದ್ದಾರೆ.
ಇನ್ನು ದಿನಸಿ ಕಿಟ್ ವಿತರಣೆ ವೇಲೆ ಆಶಾ ಕಾರ್ಯಕತೆಯರು, ಆಟೋ ಚಾಲಕರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version