ಆರೋಗ್ಯ / HEALTH

ಮಕಾಡೆ ಮಲಗಿದ ನಿಂಬೆ ಅಭಿವೃದ್ಧಿ ನಿಗಮ..

Published

on

(ಇಂಡಿ)ವಿಜಯಪುರ:ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳೆದ ಬೆಳೆ ಮಾರಾಟ ಮಾಡಲಾಗದೇ ರೈತ ಸಂಕಷ್ಟ ಎದುರಿಸುವಂತಾಗಿದ್ದು,ರಾಜ್ಯ ಸರ್ಕಾರ ಕೂಡಲೇ ಇಂತಹ ರೈತರ ನೆರವಿಗೆ ಬರಬೇಕು ಎಂದು ವಿಜಯಪುರ ಜಿಲ್ಲೆಯ ಬಿಜೆಪಿ ಘಟಕದ ಉಪಾಧ್ಯಕ್ಷ ದಯಸಾಗರ್ ಪಾಟೀಲ್ ಆಗ್ರಹಿಸಿದ್ದಾರೆ.
ಇಂಡಿ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲಾಕ್‌ಡೌನ್ ಜೊತೆಗೆ ಆಲಿಕಲ್ಲುಮಳೆಯಿಂದಾಗಿಯೂ ರೈತ ಸಂಕಷ್ಟ ಪಡುವಂತಾಗಿದೆ.ಹೀಗಾಗಿ ಸರ್ಕಾರ ತಾಲೂಕಿನ ನಿಂಬೆ ಹಾಗೂ ದಾಳಿಂಬೆ ಪತ್ರ ಎಕರೆಗೆ ಕನಿಷ್ಟ ೫೦ಸಾವಿರ ರೂಪಾಯಿ ಪ್ಯಾಕೇಜ್ ಪರಿಹಾರ ನೀಡಬೇಕೆಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಇನ್ನು ರಾಜ್ಯದ ನಿಂಬೆ ಅಭಿವೃದ್ಧಿ ನಿಗಮ ಜಾಣ ಕುರಡತನಂತೆ ವರ್ತಿಸುತ್ತಿದೆ.ವಿಶೇಷವಾಗಿ ನಮ್ಮ ತಾಲೂಕಿನಲ್ಲಿಯೇ ನಿಂಬೆ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಆದರೆ ಇಲ್ಲಿಯವರೆಗೆ ನಿಗಮ ಯಾವುದೇ ಚಟುವಟಿಕೆ ಅಥವಾ ರೈತ ಕಾರ್ಯಕ್ರಮಗಳಿಲ್ಲದೇ ಮಕಾಡೆ ಮಲಗಿದೆ ಎಂದು ಆರೋಪಿಸಿದರು.

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ (ಇಂಡಿ)ವಿಜಯಪುರ

Click to comment

Trending

Exit mobile version