ಜನಸ್ಪಂದನ

ಬಸವೇಶ್ವರ ನೀರಾವರಿ ಯೋಜನೆ ಅತಿ ಶೀಘ್ರದಲ್ಲಿ ಪೂರ್ಣ

Published

on

ಅಥಣಿ(ಬೆಳಗಾವಿ):ಕಾಗವಾಡ ಕ್ಷೇತ್ರದ ಬಹುದಿನಗಳ ಬೇಡಿಕೆಯಾದ ಶ್ರೀಬಸವೇಶ್ವರ ನೀರಾವರಿ ಯೋಜನೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಕೆಲಸ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿನ ಐನಾಪುರ ಗ್ರಾಮದಲ್ಲಿರುವ ಮುಖ್ಯ ಜಾಕ್ವೆಲ್ ಕೆನಾಲ್‌ಗೆ ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ ಜೊತೆ ಭೇಟಿ ನೀಡಿ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಶ್ರೀಮಂತ ಪಾಟೀಲ್ ಅವರು ಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರದ ಜನತೆಗೆ ಕೊಟ್ಟಮಾತಿನಂತೆ ಬಸವೇಶ್ವರ ಏತ ನೀರಾವರಿ ಕಾಮಗಾರಿ ಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಉಣಿಸುವ ಅಂತ ಕೆಲಸ ಮಾಡುತ್ತೇನೆ ಎಂದರು.
ಜವಳಿ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಶ್ರೀಮಂತ ಪಾಟೀಲ್ ಮಾತನಾಡಿ,ಕಾಗವಾಡ ಮತ ಕ್ಷೇತ್ರದ ಮತದಾರರ ಬಹುದಿನಗಳ ಬೇಡಿಕೆಯಾದ ಬೆಳಗಾಂ-ಬಸವೇಶ್ವರ ಏತ ನೀರಾವರಿ ಯೋಜನೆ ಹಾಗೂ ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ೪ ಟಿಎಂಸಿ ನೀರು ಬಿಡುವುದು ಮತ್ತು ಸವಳುಗಳು ಕೆರೆ ತುಂಬಾ ಯೋಜನೆಗಳ ಬೇಡಿಕೆಗಳನ್ನು ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಗಮನಕ್ಕೆ ತಂದಿದ್ದೆ. ಆ ವೇಳೆ ಅತಿ ಶೀಘ್ರದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ಕರೆದು ಹಂತಹAತವಾಗಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಬಹುಮುಖ್ಯವಾದ ಬಸವೇಶ್ವರ ನೀರಾವರಿ ಯೋಜನೆಯನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಿ ಕೊಡುತ್ತೇನೆ ಎಂಬುದಾಗಿ ಹೇಳಿದ್ದಾರೆ ಎಂದರು.

ಸತೀಶ ಕೋಳಿ ಎಕ್ಸ್ ಪ್ರೆಸ್ ಟಿವಿ ಅಥಣಿ(ಬೆಳಗಾವಿ)

Click to comment

Trending

Exit mobile version