ಕೋಲಾರ

ಓವರ್ ಹೆಡ್ ಟ್ಯಾಂಕ್ ಕುಸಿದು ವೃದ್ಧ ಸಾವು

Published

on

ಬಂಗಾರಪೇಟೆ(ಕೋಲಾರ): ಓವರ್ ಹೆಡ್ ಟ್ಯಾಂಕ್ ಕುಸಿದು ವೃದ್ಧ ಸಾವು ಕಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಮರಗಲ್ ಗ್ರಾಮದಲ್ಲಿ ನಡೆದಿದೆ.
ಮುನಿ ವೆಂಕಟಪ್ಪ (೬೮)ಸಾವು ಕಂಡ ವೃದ್ಧ. ಕೆಲ ವರ್ಷಗಳಿಂದ ಪಾಳು ಬಿದ್ದಿದ್ದ ಓವರ್ ಹೆಡ್ ಟ್ಯಾಂಕ್ ಕೆಳಗೆ ಮುನಿ ವೆಂಕಟಪ್ಪ ಕುಳಿತಿದ್ದ.ಈ ವೇಳೆ ಏಕಾಎಕಿ ಟ್ಯಾಂಕ್ ಕುಸಿದು ಬಿದ್ದಿದೆ.ಪರಿಣಾಮ ಸ್ಥಳದಲ್ಲೇ ಮುನಿ ವೆಂಕಟಪ್ಪ ಸಾವು ಕಂಡಿದ್ದಾನೆ.
ಇನ್ನು ಮೃತ ಮುನಿ ವೆಂಕಟಪ್ಪನ ಶವವನ್ನು ಬಂಗಾರಪೇಟೆ ಆಸ್ಪತ್ರೆಗೆ ರವಾನಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಬಂಗಾರಪೇಟೆ(ಕೋಲಾರ)

Click to comment

Trending

Exit mobile version