ಜನಸ್ಪಂದನ

ಮಾನ್ವಿಯಲ್ಲಿ ಬಡ ವಿದ್ಯಾರ್ಥಿಗಳ ಪೋಷಕರ ಮೇಲೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳ ಗದಪ್ರಹಾರ..

Published

on

ಮಾನವಿ(ರಾಯಚೂರು): ಮಾನ್ವಿ ತಾಲೂಕಿನಾದ್ಯಂತ ಇರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಿನನಿತ್ಯ ಪೋಷಕರಿಗೆ ಪದೇ ಪದೇ ಕರೆ ಮತ್ತು ಸಂದೇಶದ ಮೂಲಕ ಶುಲ್ಕ ಪಾವತಿ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಕರವೇ ಜನಪರಬಣ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಸಂಬAಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿರುವ ಕರವೇ ಜನಪರಬಣ ಕಾರ್ಯಕರ್ತರು,ಲಾಕ್ ಡೌನ್ ಜಾರಿಯಲ್ಲಿರುವ ಸಮಯದಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳ ಪೋಷಕರು ಬೋಧನ ಶುಲ್ಕ ಕಟ್ಟಲಾಗುವುದಿಲ್ಲ.ಹೀಗಾಗಿಯೇ ಕಳೆದ ಏಪ್ರಿಲ್ ೨೪ರಂದು ರಾಜ್ಯ ಸರ್ಕಾರ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರಿಗೆ ಶುಲ್ಕ ಕಟ್ಟುವಂತೆ ಒತ್ತಡ ಹೇರಬಾರದು.ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು
ಸ್ವ ಇಚ್ಛೆಯಿಂದ ಶುಲ್ಕ ಕಟ್ಟುವ ಪೋಷಕರಿಂದ ಹಾಗೂ ಆರ್ಥಿಕ ಸ್ಥಿತಿವಂತ ಪೋಷಕರಿಂದ ಶುಲ್ಕ ತೆಗೆದುಕೊಳ್ಳಬಹುದು ಎಂದು ಆದೇಶ ಹೊರಡಿಸಿದೆ.
ಆದರೆ ಮಾನ್ವಿ ತಾಲೂಕಿನಾದ್ಯಂತ ಇರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಕಡು ಬಡ ಕುಟುಂಬದ ಮಕ್ಕಳಿಂದ ಒತ್ತಾಯ ಪೂರ್ವಕವಾಗಿ ಬೋಧನಾ ಶುಲ್ಕ ವಸೂಲಿ ಮಾಡಲು ಹೊರಟಿವೆ.ಈ ಕೂಡಲೇ ಬೋಧನಾ ಶುಲ್ಕ ಕಟ್ಟಲು ಒತ್ತಾಯ ಹಾಗೂ ಒತ್ತಡ ಹೇರುವ ಇಂತಹ ಖಾಸಗಿ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಮಾನವಿ(ರಾಯಚೂರು)

Click to comment

Trending

Exit mobile version