ಆರೋಗ್ಯ / HEALTH

ಸಚಿವರ-ಶಾಸಕರ ಮಧ್ಯೆ ಕೋಳಿ ಜಗಳ..ಅಧಿಕಾರಿಗಳಿಗೆ ಪುಕ್ಕಟ್ಟೆ ಮನರಂಜನೆ..

Published

on

ಮಂಡ್ಯ:ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿದ್ದು ಇತಿಹಾಸವಾದರೆ, ಕಮಲದ ಜೊತೆ ಜೊತೆಯಲ್ಲಿಯೇ ಕೊರೊನಾ ಅರಳಿಸಿದ್ದು ಬಹಿರಂಗ ಸತ್ಯ.
ಸದ್ಯ ಕೋವಿಡ್-೧೯ ಸಂಬ0ಧ ಜಿಲ್ಲೆಯ ಶಾಸಕರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಾಕ್ಸಮರದ ಮುಸುಕಿನ ಗುದ್ದಾಟ ಆಗಿಂದಾಗ್ಗೆ ತಾರಕಕ್ಕೇರುತ್ತದೆ ಜೊತೆಗೆ ಹಾಗೆಯೇ ತಣ್ಣಗಾಗುತ್ತದೆ.ಇದಕ್ಕೆ ತಾಜಾ ಉದಾಹರಣೆ ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಕೋವಿಡ್ ಸಂಬ0ಧದ ಸಭೆ.
ಇದೇ ಮೇ.೨೫ ರಂದು ಪತ್ರಿಕಾಗೋಷ್ಠಿ ನೆಡೆಸಿದ ಜೆಡಿಎಸ್ ಶಾಸಕರು ನಮಗೆ ಕೋವಿಡ್ ನಿಯಂತ್ರಣದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾಡಳಿತ ಸತ್ಯವನ್ನು ಮಾರೆ ಮಾಚುತ್ತಿದ್ದಾರೆ.ಮುಂದಿನ ಎರಡು ದಿನಗಳೊಳಗೆ ಸಭೆ ಕರೆದು ಸ್ಪಷ್ಟೀಕರಣ ನೀಡದಿದ್ದರೆ ಧರಣಿಯ ಎಚ್ಚರಿಕೆ ನೀಡಿದ್ದರು.
ಅದರಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ ಸಭೆ ಕರೆಯಲಾಗಿತ್ತು. ಸಭೆಗೆ ಹಾಜರಾಗದೆ ಸಭೆಯಿಂದ ದೂರ ಉಳಿದಿದ್ದ ಶಾಸಕರನ್ನು ಮನವೊಲಿಸಿ ನಿಗದಿತ ಸಮಯಕ್ಕಿಂತ ೪೦ ನಿಮಿಷ ತಡವಾಗಿ ಸಭೆ ಪ್ರಾರಂಭಿಸಲಾಯಿತು.
ಇನ್ನು ಸಭೆಯಲ್ಲಿ ಶಾಸಕ ಸುರೇಶ್ ಗೌಡ ಮತ್ತು ಸಚಿವ ನಾರಯಣಗೌಡರ ಮಧ್ಯೆ ಮಾತಿನ ಚಕಮಕಿ ತಾರಕಕ್ಕೇರಿತು.
ಅದರಲ್ಲೂ `ಇದರ ಬಗ್ಗೆ ಕೇಳೋಕೆ ನಿನ್ಯಾವನು ಹೋಗೋಲೇ ಎಂದು ಸಚಿವ ನಾರಾಯಣಗೌಡ ಶಾಸಕ ಸುರೇಶ್ ಗೌಡರಿಗೆ ಏಕವಚನ ಬಳಸಿದ್ದು, ಸಭೆ ಗೊಂದಲದ ಗೂಡಾಯಿತು. ಈ ಮಧ್ಯೆ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ನಮ್ಮದು ಕೋಳಿ ಜಗಳ.ನಾವು ಈ ಹಿಂದೆ ಒಂದೇ ಪಕ್ಷದಲ್ಲಿದ್ದವರು.ಒಂದೇ ಕಾರಿನಲ್ಲಿ ಓಡಾಡುತ್ತಿದ್ದವರು.ಸಣ್ಣ-ಪುಟ್ಟ ನ್ಯೂನ್ಯತೆಗಳಿದ್ದವು.ಎಲ್ಲವನ್ನು ಈ ಸಭೆಯಲ್ಲಿ ಬಗೆಹರಿಸಿಕೊಂಡಿದ್ದೇವೆ. ಕೆಲ ಅನುಮಾನಗಳಿಗೆ ಈ ಸಭೆಯಲ್ಲಿ ತೆರೆ ಬಿದ್ದಿದೆ. ಈ ಸಭೆಯಲ್ಲಿ ಯಾವುದೇ ಜಗಳವಾಗಿಲ್ಲ ಎಂದು ಹೇಳಿದರು.
ಒಟ್ಟಾರೆ ಜನಪ್ರತಿನಿಧಿಗಳ ಇಂತಹ ಜಗಳ ಅಧಿಕಾರಿಗಳಿಗೆ ಪುಕ್ಕಟ್ಟೆ ಮನರಂಜನೆ ನೀಡಿದ್ದಂತೂ ಸತ್ಯವಾದರೂ, ಗಂಡ-ಹೆAಡತಿ ಜಗಳದಲ್ಲಿ ಕೂಸು ಬಡವವಾದಂತೆ ಜಿಲ್ಲೆಯ ಜನರ ಪರಿಸ್ಥಿತಿ ಅಧೋಗತಿಗೆ ಇಳಿದಂತಾಗಿದೆ.

ಎಸ್.ವೆ0ಕಟೇಶ್ ಎಕ್ಸ್ ಪ್ರೆಸ್ ಟಿವಿ ಮಂಡ್ಯ

Click to comment

Trending

Exit mobile version