ಆರೋಗ್ಯ / HEALTH

ವೈಜ್ಞಾನಿಕ ಬೆಲೆಯಲ್ಲಿ ಕುರಿ ಮೇಕೆ ಖರೀದಿ.. ವಾರದ 7 ದಿನವೂ ಮಾರಾಟ..

Published

on

ಲಿಂಗಸೂಗೂರು(ರಾಯಚೂರು): ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ತೆರೆಯಲಾಗಿರುವ ವೈಜ್ಞಾನಿಕ ಬೆಲೆಯಲ್ಲಿ ಕುರಿ ಮತ್ತು ಮೇಕೆ ಖರೀದಿ ಹಾಗೂ ಮಾರಾಟ ಕೇಂದ್ರದಿAದ ಉದ್ಯಮಿದಾರರಿಗೆ ಉತ್ತಮ ಬೆಲೆ ಕಲ್ಪಿಸಲಿದೆ ಎಂದು ಲಿಂಗಸುಗೂರು ಎಪಿಎಂಸಿ ಅಧ್ಯಕ್ಷ ಜಂಬನಗೌಡ ಪಾಟೀಲ್ ಹೇಳಿದರು.
ಕುರಿ ಮತ್ತು ಮೇಕೆ ಸಾಕಣಿಕೆದಾರರ ಮಹಾಮಂಡಳ ಹಾಗೂ ಎಪಿಎಂಸಿ ಸಹಯೋಗದಲ್ಲಿ ನಿರ್ಮಿಸಲಾಗಿರುವ ಕುರಿ ಮತ್ತು ಮೇಕೆ ವೈಜ್ಞಾನಿಕ ತೂಕದ ಮಾರುಕಟ್ಟೆ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕುರಿ ಮತ್ತು ಮೇಕೆ ಸಾಕಣಿಕೆ ರೈತರ ಕೃಷಿ ಚಟುವಟಿಕೆಯಲ್ಲಿ ಉಪ ಕಸುಬಾಗಿ ಅಳವಡಿಸಿಕೊಂಡಿದ್ದಾರೆ ಎಂದರು.
ಇನ್ನೂ ಕೆಲವರು ವೈಜ್ಞಾನಿಕ ಪದ್ದತಿಯಲ್ಲಿ ಕುರಿ,ಟಗರು,ಮೇಕೆ ಸಾಕಣಿಕೆ ಮಾಡಿ ಉದ್ಯೋಗವಾಗಿಸಿಕೊಂಡಿದ್ದಾರೆ.ಆದರೆ ಕಷ್ಟ ಪಟ್ಟು ಸಾಕಣಿಕೆ ಮಾಡಿವರಿಗೆ ಮಧ್ಯವರ್ತಿಗಳ ಹಾವಳಿಯಿಂದ ಸೂಕ್ತ ಬೆಲೆ ಸಿಗದೇ ಸಾವಿರಾರು ರೂ.ನಷ್ಟ ಅನುಭವಿಸುವಂತಾಗಿದೆ.ಈ ಹಿನ್ನೆಲೆಯಿಂದ ಸರ್ಕಾರ ಸ್ಥಳೀಯ ಮುದಗಲ್ ಹೋಬಳಿ ಕುರಿ ಮತ್ತು ಉಣೆ ಉತ್ಪಾದಕರ ಸಹಕಾರ ಸಂಘಕ್ಕೆ ವೈಜ್ಞಾನಿಕ ಕುರಿ ಮತ್ತು ಮೇಕೆ ಮಾರಾಟ ಹಾಗೂ ಖರೀದಿ ಕೇಂದ್ರ ತೆರೆಯಲು ಪರವಾನಿಗೆ ನೀಡಿದ್ದು ಕೇಂದ್ರದಲ್ಲಿ ಜೀವಂತ ಕುರಿ, ಮೇಕೆಗಳನ್ನು ಸೂಕದ ಲೆಕ್ಕದಲ್ಲಿ ಬೆಲೆ ನಿಗದಿ ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಕುರಿ ಸಾಕಣಿಕೆದಾರರು ಮತ್ತು ಖರೀದಿದಾರರು ಪಡೆದುಕೊಳ್ಳಬೇಕು ಎಂದರು.
ಕೊರೊನಾ ಲಾಕ್‌ಡೌನ್ ದಿಂದ ಪ್ರತಿ ಭಾನುವಾರ ನಡೆಯುತಿದ್ದ ವಾರದ ಜಾನುವಾರಗಳ ಸಂತೆ ನಿಲ್ಲಿಸಲಾಗಿದೆ.ಇದರಿಂದ ಕುರಿ ಸಾಕಣಿಕೆದಾರರು ತೊಂದರೆಗೆ ಸಿಲುಕುವಂತಾಗಿದೆ.
ಈ ಉದ್ದೇಶದಿಂದ ಎಪಿಎಂಸಿಯಲ್ಲಿ ಕುರಿ ಮತ್ತು ಮೇಕೆಗಳನ್ನು ತೂಕದ ಲೆಕ್ಕದಲ್ಲಿ ಖರಿದಿ, ಮಾರಾಟ ಮಾಡಲು ವ್ಯವಸ್ಥೆ ಕೈಗೊಳ್ಳಲಾಗಿದ್ದು,ಗ್ರಾಮೀಣ ಜನರು ದೈಹಿಕ ಅಂತರದಲ್ಲಿ ಸರದಿಯಲ್ಲಿ ನಿಂತು ಕುರಿ ಹಾಗೂ ಮೇಕೆ, ಟಗರು, ಓತುಗಳನ್ನು ಮಾರಾಟ ಮತ್ತು ಖರೀದಿ ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭ ಮುದಗಲ್ ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವಪ್ಪ ಕೋಟೆ, ನಿರ್ದೇಶಕ ಯಮನೂರ ನದಾಫ್,ಕಾರ್ಯದರ್ಶಿ ಶರಣಯ್ಯ ಬಿ.ಒಡೆಯರ್ ಹಾಜರಿದ್ದರು.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Click to comment

Trending

Exit mobile version