ಆರೋಗ್ಯ / HEALTH

ಕೆಲಸಕ್ಕೆ ಮಾತ್ರ ಕರಿಬೇಡಿ..ಊಟಕ್ಕೆ ಮಾತ್ರ ಮರಿಬೇಡಿ ಅಂತಾರೆ ನೊಣವಿನಕೆರೆಯ ಈ ಅಧಿಕಾರಿ..!

Published

on

ತಿಪಟೂರು(ತುಮಕೂರು):ಇದು ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ೪ನೇ ವಾರ್ಡ್ನ ಹೇಮಾವತಿ ಬಡಾವಣೆ ನಿವಾಸಿಗಳ ನೋವಿನ ಸುದ್ದಿ..
ದೇಶದಲ್ಲೇ ಮಾರಕವಾಗಿ ಕಾಡುತ್ತಿರುವ ಕೋವಿಡ್-೧೯ ಮಹಾಮಾರಿ ಕಾಯಿಲೆ ಒಂದು ಕಡೆಯಾದರೆ ನೊಣವಿನಕೆರೆಯಲ್ಲಿ ಜನರಿಗೆ ಆಗುತ್ತಿರುವ ಹಂದಿಗಳಿAದ ಆಗುತ್ತಿರುವ ಸಮಸ್ಯೆ ಇನ್ನೊಂದು ಕಡೆಯಾಗಿದೆ.
ಸದ್ಯ ಈ ಜನರು ವಾಸವಿರುವ ಊರಿನ ಮಧ್ಯ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು,ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಜನಪ್ರತಿನಿದಿಗಳಾಗಲಿ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಿಳಿದು ತಿಳಿಯದಂತೆ ವರ್ತಿಸುತ್ತಿದ್ದಾರೆ.
ಜೊತೆಗೆ ನಾಯಿಗಳ ಹಾವಳಿ ಕೂಡ ಇಲ್ಲಿ ಜಾಸ್ತಿಯಾಗಿದ್ದು, ಬಹಳಷ್ಟು ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.ಆದರೆ ಆದರೆ ಇಷ್ಟೆಲ್ಲಾ ಸಮಸ್ಯೆ ತುಂಬಿ ತುಳುಕುತ್ತಿದ್ದರೂ ಇದಕ್ಕೆ ಸ್ಪಂದಿಸದ ನೊಣವಿನಕೆರೆ ಪಂಚಾಯ್ತಿ ಅಧಿಕಾರಿಗಳು ಹಾಯಾಗಿ ಮನೆಯಲ್ಲೇ ಮಲಗಿದ್ದಾರೆ.
ಇನ್ನು ಬಹಳ ವರ್ಷಗಳಿಂದ ನೊಣವಿನಕೆರೆ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಓ ಜಾಗ ಖಾಲಿ ಬಿದ್ದಿದೆ. ಹೀಗಾಗಿ ಪಿಡಿಓ ಪರವಾಗಿ ಪ್ರಭಾರ ಸೆಕ್ರೆಟರಿ ಇಂಚಾರ್ಜ್ ವಹಿಸಿಕೊಂಡಿದ್ದಾರೆ.
ವಿಪರ್ಯಾಸವೆAದರೆ ಪ್ರಭಾರಿ ಪಿಡಿಓ ಕೊರೊನಾ ಜಾಗೃತಿಯಾಗಲಿ,ಸಮಸ್ಯೆ ಪರಿಹರಿಸುವುದಾಗಲಿ ಮಾಡದೇ `ಕೆಲಸಕ್ಕೆ ಮಾತ್ರ ಕರಿಬೇಡಿ..ಊಟಕ್ಕೆ ಮಾತ್ರ ಮರಿಬೇಡಿ ಎನ್ನುವ ರೀತಿ ವರ್ತನೆ ತೋರಿಸುತ್ತಿದ್ದಾರೆ..
ಒಟ್ಟಾರೆ ಕಲ್ಪತರು ನಾಡಿನಲ್ಲೇ ದೊಡ್ಡ ಹೋಬಳಿ ಕೇಂದ್ರ ಎನಿಸಿಕೊಂಡಿರುವ ನೊಣವಿನಕೆರೆ ಜನರ ಸಮಸ್ಯೆ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ..ಲೆಕ್ಕವೇ ಇಲ್ಲದಷ್ಟಿವೆ.. ಆದರೆ ಈ ಸಮಸ್ಯೆಗಳನ್ನ ಪರಿಹರಿಸುವುದಿರಲಿ ಅವುಗಳನ್ನು ಕೇಳಿಸಿಕೊಳ್ಳುವಷ್ಟು ಪುರುಸೋತ್ತು ಸಂಬAಧಪಟ್ಟ ಅಧಿಕಾರಿಗಳಿಗಾಗಲಿ,ಜನಪ್ರತಿನಿಧಿಗಳಿಗಾಗಲಿ ಇಲ್ಲದಿರುವುದು ವಿಪರ್ಯಾಸವೇ ಸರಿ..

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Click to comment

Trending

Exit mobile version