ಆರೋಗ್ಯ / HEALTH

ತೋಟಗಾರಿಕೆ ಇಲಾಖೆಯ ಅಕ್ರಮ ಬಹಿರಂಗ..

Published

on

ನಾಗಮ0ಗಲ(ಮ0ಡ್ಯ):ಜಿಲ್ಲೆಯ ನಾಗಮಂಗಲ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತುರ್ತು ಸಾಮಾನ್ಯ ಸಭೆ ನಡೆಯಿತು.
ಸದ್ಯ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳೂ ಸೇರಿದಂತೆ ಪ್ರಸ್ತುತ ಸನ್ನಿವೇಶಕ್ಕೆ ಅಗತ್ಯವಿರುವ ಇಲಾಖೆಗಳ ಪ್ರಗತಿ ಪರಿಶೀಲನಾ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯಲ್ಲಾಗಿರುವ ಅಕ್ರಮ ಅನಾವರಣಗೊಂಡಿದೆ.
ಅAದ ಹಾಗೇ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಮಲ್ಲಸಂದ್ರ ತೋಟಗಾರಿಕೆ ಫಾರಂನಲ್ಲಿ ಬಿತ್ತನೆ ಮಾಡಲಾಗಿದ್ದ ೭೦೦೦ ತೆಂಗಿನ ಸಸಿಗಳನ್ನು ಹೊರ ಜಿಲ್ಲೆಯ ರೈತರಿಗೆ ನಿಯಮಬಾಹಿರವಾಗಿ ಮಾರಾಟ ಮಾಡಲಾಗಿದೆ.ಅಷ್ಟು ಮಾತ್ರವಲ್ಲದೆ ಒಂದು ಸಸಿಗೆ ೧೧೦ ರೂ.ಗಳಿಂದ ೧೨೫ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.ಜೊತೆಗೆ ತಾಲ್ಲೂಕಿನ ರೈತರನ್ನು ನಿರ್ಲಕ್ಷಿಸಲಾಗುತ್ತಿದೆ.ಇದರಿಂದ ಸ್ಥಳೀಯ ರೈತರಿಗೆ ಮೋಸವಾಗುತ್ತಿದೆ. ತೋಟಗಾರಿಕೆಗೆ ಸಂಬAಧಿಸಿದ ಗಿಡಗಳ ಮಾರಾಟದಲ್ಲೂ ಲಕ್ಷಾಂತರ ರೂ. ದೋಖ ಆಗಿದೆ.
ಈ ಕೂಡಲೆ ಮಲ್ಲಸಂದ್ರ ತೋಟಗಾರಿಕೆ ಪಾರಂನ ಅಧಿಕಾರಿಯ ಮೇಲೆ ಸೂಕ್ತ ತನಿಖೆ ನಡೆಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಇದೇ ಜಿಲ್ಲೆಯ ಉಸ್ತುವಾರಿ ಸಚಿವ ನಾರಾಯಣಗೌಡ ಮತ್ತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸದಸ್ಯ ನವೀನ್ ಕುಮಾರ್ ಒತ್ತಾಯಿಸಿದರು.
ಇನ್ನು ರೈತರಿಂದ ಕನಿಷ್ಟ ಕಡಿಮೆ ಬೆಲೆಗೆ ಖರೀದಿಸುತ್ತಿರುವ ತರಕಾರಿ ಬೆಳೆಗಳು,ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ತರಕಾರಿ ಅಂಗಡಿ ಮಾಲೀಕರಿಂದ ರೈತರಿಗೆ ಮತ್ತು ಗ್ರಾಹಕರಿಗೆ ದೋಖಾ ಆಗುತ್ತಿದೆ. ಪ್ರತಿ ತರಕಾರಿ ಅಂಗಡಿಗಳಿಗೂ ಬೆಲೆ ನಿಗದಿಪಡಿಸುವ ಮೂಲಕ ರೈತರಿಗೆ ಕನಿಷ್ಟ ಬೆಂಬಲ ಬೆಲೆ ಸಿಗುವಂತಾಗಬೇಕು ಎಂದು ಸದಸ್ಯ ಗಿರೀಶ್ ಅಧ್ಯಕ್ಷರನ್ನು ಅಗ್ರಹಿಸಿದರು.
ಈ ವೇಳೆ ಕೃಷಿ, ರೇಷ್ಮೆ, ಆಹಾರ, ಇಲಾಖೆಗಳಲ್ಲಿನ ಅಕ್ರಮಗಳು ಕೂಡ ಅನಾವರಣವಾದವು.
ಒಟ್ಟಾರೆ, ಕೋವಿಡ್ ಹಿನ್ನಲೆಯಲ್ಲಿ ತತ್ತರಿಸಿರುವ ರೈತಾಪಿ ವರ್ಗ ಹಾಗೂ ಬಡ ಕುಟುಂಬಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕರೆಯಲಾಗಿದ್ದ ತಾಲ್ಲೂಕು ಪಂಚಾಯ್ತಿ ತುರ್ತು ಸಾಮಾನ್ಯ ಸಭೆ ಅಧಿಕಾರಿಗಳ ಅಕ್ರಮದ ಬಯಲಾಟಕ್ಕೆ ಸಾಕ್ಷಿಯಾಗಿದ್ದಂತೂ ನಿಜ.
ಇದೇ ವೇಳೆ ಸಭೆಯಲ್ಲಿ ತಾ.ಪಂ. ಅಧ್ಯಕ್ಷರಾದ ದಾಸೇಗೌಡ್ರು,ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಹಾಗೂ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಆರ್.ಅನ0ತರಾಜು ಉಪಸ್ಥಿತಿಯಲ್ಲಿ ಹತ್ತಕ್ಕೂ ಹೆಚ್ಚು ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Click to comment

Trending

Exit mobile version