ಆರೋಗ್ಯ / HEALTH

ಉದ್ಯೋಗ, ಆಹಾರ ಕೊಡಿ..ಹಿಂಸೆ ತಡೆಗಟ್ಟಿ..ಮಹಿಳೆಯರ ಆಗ್ರಹ..

Published

on

ಮಳವಳ್ಳಿ(ಮಂಡ್ಯ):ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಉದ್ಯೋಗ, ಆಹಾರಕ್ಕಾಗಿ ಮತ್ತು ಹಿಂಸೆಯ ತಡೆಗಾಗಿ ಒತ್ತಾಯಿಸಿ ಜನವಾದಿ ಮಹಿಳೆ ಸಂಘಟನೆ ಪ್ರತಿಭಟನೆ ನಡೆಸಲಾಯಿತು.
ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಎದುರು ತಾಲ್ಲೂಕು ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಂಜುಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ದೇಶ ವ್ಯಾಪ್ತಿ ಎರಡು ತಿಂಗಳು ಲಾಕ್‌ಡೌನ್ ಯಾಗಿದ್ದು,ಇದರಿಂದ ಜನರು ಸಂಕಷ್ಟದಲ್ಲಿದ್ದಾರೆ.
ಅವರಿಗೆ ಆದಾಯ ತೆರಿಗೆಯಿಂದ ಹೊರಗಿರುವ ಎಲ್ಲಾ ಕುಟುಂಬಗಳ ಖಾತೆ ೭೫೦೦ರೂ.ಹಾಕಬೇಕು,ಪ್ರತಿಯೊಬ್ಬರಿಗೂ ತಲಾ೧೦ ಕೆ.ಜಿಯಂತೆ ಆಹಾರ ಧಾನ್ಯಗಳನ್ನು ೬ ತಿಂಗಳವರೆಗೂ ಉಚಿತವಾಗಿ ನೀಡಬೇಕು,ಉದ್ಯೋಗ ಖಾತರಿಯನ್ನು ನಗರ ಪಂಚಾಯಿತಿಗಳಿಗೂ ವಿಸ್ತರಣೆ ಮಾಡಬೇಕು ಸೇರಿದಂತೆ ೧೬ ಬೇಡಿಕೆಗಳ ಪಟ್ಟಿ ಮನವಿಯನ್ನು ತಹಸೀಲ್ದಾರ್ ಚಂದ್ರಮೌಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತಾಲ್ಲೂಕು ಕಾರ್ಯದರ್ಶಿ ಮಂಜುಳ, ಖಜಾಂಚಿ ಪ್ರೇಮ, ಸುನೀತಾ, ಸುನಂದ, ಜಯಶೀಲ, ನಂಜಾಮಣಿ ಭಾಗವಹಿಸಿದ್ದರು.
ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Click to comment

Trending

Exit mobile version