ಆರೋಗ್ಯ / HEALTH

ಕೊರೊನಾಗಿಂತ ಮೊದಲೇ ಬೇರೆ ರೋಗದಿಂದ ನಾವ್ ಸಾಯೋದು ಗ್ಯಾರಂಟಿ..!

Published

on

ತಿಪಟೂರು(ತುಮಕೂರು): ಕೊರೊನಾ ರೋಗದ ಹಾವಳಿಯಿಂದ ಅಂತರ ಜಿಲ್ಲೆ ಅಂತರರಾಜ್ಯದಿAದ ಬಂದAತಹ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿ ಸಮರ್ಪಕ ಆಹಾರ, ನೀರು ಮತ್ತು ಇತರೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ನಾವು ಇನ್ನೂ ಇಲ್ಲಿಯೇ ಇದ್ದರೆ ಇನ್ನಿತರೆ ಕಾಯಿಲೆಗಳೂ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ನಗರದ ಬಲಿಜ ಸಮಾಜದ ವಿದ್ಯಾರ್ಥಿನಿಲಯದಲ್ಲಿ ಕ್ಯಾರಂಟೈನ್‌ಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇAದು ಬೆಳಗ್ಗೆ ಕೊಟ್ಟ ಚಿತ್ರಾನ್ನದಲ್ಲಿ ಅಕ್ಕಿಯೂ ಬೆಂದೇ ಇರಲಿಲ್ಲ, ಇನ್ನು ಇವರು ಕೊಡುವ ಚಪಾತಿ ಅರ್ಧಬೆಂದಿದ್ದರೆ ಉಳಿದ್ದು ಬೆಂದೇ ಇರುವುದಿಲ್ಲ ನಿಷೇದಿತ ಪ್ಲಾಸ್ಟಿಕ್ ಬಳಸಿದರೆ ರಸ್ತೆಬದಿಯ ಬಡವರ ಹೋಟೆಲ್‌ಗಳಿಗೆ ದಂಡ ವಿಧಿಸುವ ಪ್ರಾಮಾಣಿಕ ಅಧಿಕಾರಿಗಳು ಇಂದೇಕೆ ಕಳಪೆಗುಣಮಟ್ಟದ ಪ್ಲಾಸ್ಟಿಕ್‌ನಿಂದ ಪೊಟ್ಟಣ ಕಟ್ಟಿರುವ ಆಹಾರ ತಂದು ನೀಡುತ್ತಾರೆಂದು ಪ್ರಶ್ನಿಸಿದ್ದಾರೆ.
ಅಲ್ಲದೆ,ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಸೂಕ್ತವಾದ ಕುಡಿಯುವ ನೀರು, ಶೌಚಾಲಯವಿಲ್ಲ ಇನ್ನೂ ಶೌಚಾಲಯಗಳನ್ನು ಸ್ವಚ್ಚಮಾಡಿ ಎಷ್ಟೋ ದಿನಗಳು ಕಳೆದಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ.ಇನ್ನೂ ನಾವು ಇಲ್ಲೇ ಇದ್ದರೆ ಕೊರೊನಾ ರೋಗ ಬರುವುದಿರಲಿ ಅದಕ್ಕೂ ಮೊದಲೇ ಬೇರೆ ರೋಗಗಳು ಬಂದು ಸಾವು ಶಾಶ್ವತವಾಗಿ ಆಸ್ಪತ್ರೆ ಸೇರುವ ಭಯವಿದೆ ಎಂದು ಮಹಾರಾಷ್ಟ್ರಕ್ಕೆ ಹೋಗಿ ಹಿಂದಿರುಗಿದ ವಾಹನ ಚಾಲಕ ತಿಳಿಸಿದ್ದಾರೆ.
ಇದಲ್ಲದೆ,ಕೊರೊನಾ ರೋಗಕ್ಕೆ ಯಾವುದೇ ಲಸಿಕೆ ಇಲ್ಲ, ಇದನ್ನು ಬರುವ ಮುನ್ನವೇ ಮತ್ತು ನಂತರ ತಡೆಗಟ್ಟಬೇಕೆಂದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು.ಆದರೆ ಇಲ್ಲಿ ಕ್ವಾರಂಟೈನ್‌ಗೆ ನೀಡುತ್ತಿರುವ ಆಹಾರದಲ್ಲಿ ಪೌಷ್ಠಿಕಾಂಶವಿರಲಿ ಯಾವುದೇ ಸತ್ವವೂ ಇಲ್ಲ ಜೊತೆಗೆ ಇವರು ಕೊಡುವ ಚಪಾತಿಯನ್ನು ತಿಂದರೆ ನಮಗೆ ಇಲ್ಲದ ಕಾಯಿಲೆಗಳು ಬರುತ್ತವೆ.ಇವರು ಕೊಡಲು ಆಗದಿದ್ದರೆ ನಮಗೆ ತಿಳಿಸಲಿ ನಮ್ಮ ಮನೆಯಿಂದಲೇ ಉತ್ತಮವಾದ ಆಹಾರವನ್ನು ನಾವು ತರಿಸಿಕೊಳ್ಳುತ್ತೇವೆ.ಅದಕ್ಕೂ ಸೋಂಕಿನ ಭಯವೆಂದು ಅಧಿಕಾರಿಗಳು ಆಸ್ಪದ ನೀಡುತ್ತಿಲ್ಲ.ನಾವು ಇಲ್ಲಿನ ಆಹಾರವನ್ನು ತಿನ್ನದೇ ಬದುಕುತ್ತಿದ್ದೇವೆ ಎಂದು ಆರೋಪಿಸಿದ್ದಾರೆ.
ಇನ್ನು ಇಲ್ಲಿ ಕ್ವಾರಂಟೈನ್‌ಗಳಾಗಿರುವ ವ್ಯಕ್ತಿಗಳು ಕಳುಹಿಸಿರುವ ಪೋಟೋಗಳಲ್ಲಿ ಶೌಚಾಲಯಗಳ ಬಾಗಿಲಿಗೆ ಸೂಕ್ತವಾದ ಕದಗಳೇ ಇಲ್ಲ, ಇದ್ದರೂ ಮುರಿದು ಬಿದ್ದಿವೆ.ಇನ್ನೂ ಶೌಚಾಲಯದಲ್ಲಿ ನೀರು ಸೂಕ್ತವಾಗಿಲ್ಲ.ಇವುಗಳನ್ನು ಸ್ವಚ್ಚಮಾಡಿ ಎಷ್ಟು ದಿನ ಕಳೆದಿದೆಯೋ ಎಂಬುದು ತಿಳಿಯದಾಗಿದ್ದು,ಕೊರೊನಾಗಿಂತ ದೊಡ್ಡ ಮಹಾಮಾರಿಯನ್ನು ಮೈಮೇಲೆ ಎಳೆದುಕೊಂಡು ಹೋಗುವ ಪರಿಸ್ಥಿತಿಯಲ್ಲಿಕ್ವಾರಂಟೈನ್‌ಗಳಿದ್ದಾರೆ.
ಒಟ್ನಲ್ಲಿ ಈಗಲಾದರೂ ತಾಲ್ಲೂಕು ಆಡಳಿತ ಇತ್ತ ಗಮನ ಹರಿಸಿ ಮುಂದೆಯಾದರೂ ಪೌಷ್ಠಿಕ ಆಹಾರದೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಿ ಎಂಬುದು ಕ್ವಾರಂಟೈನ್‌ಗಳ ಹಿತಕಾಯಬೇಕಾಗಿದೆ.

ಸಿ.ಎನ್.ಸಿದ್ದೇಶ್ವರ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Click to comment

Trending

Exit mobile version