ಬೆಂಗಳೂರು

ಮಹಿಳೆ ಮೇಲೆ ಮೊಟ್ಟ ಮೊದಲ ಬಾರಿಗೆ ಕೆಪಿಐಟಿ ಕೇಸ್ ದಾಖಲು..

Published

on

ಬೆಂಗಳೂರು: ವೇಶ್ಯವಾಟಿಕೆ ದಂಧೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಮಹಿಳೆ ಮೇಲೆ ಮೊಟ್ಟ ಮೊದಲ ಬಾರಿಗೆ ಕೆಪಿಐಟಿ ಕಾಯ್ದೆ ಅಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.2007 ರಿಂದ ಬೆಂಗಳೂರಿನ ಹಲವೆಡೆ ಮಸಾಜ್ ಪಾರ್ಲರ್ ತೆರೆದು ದಂಧೆ ನಡೆಸುತ್ತಿದ್ದ ಈ ಮಹಿಳೆ, ಉದ್ಯೋಗದ ಹೆಸರಲ್ಲಿ ದಂಧೆ ನಡೆಸುತ್ತಿದ್ದಳು.ಈ ಹಿಂದೆಯೇ ಇವಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು, ಬಳಿಕ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಪಡೆದು ಹೊರ ಬಂದಿದ್ದಳು.ನ್ಯಾಯಾಲಯದ ಆದೇಶವನ್ನ ಗಾಳಿಗೆ ತೂರಿ, ಮನೆ ವಿಳಾಸ ಬದಲಾಯಿಸಿ ಹಲವೆಡೆ ದಂಧೆ ಆರಂಭಿಸಿದ್ದಳು. ಹೀಗಾಗಿ ಈಕೆಯ ಮೇಲೆ ಕೆಪಿಐಟಿ ಕಾಯ್ದೆ – 1985 ಅಡಿಯಲ್ಲಿ ಈಕೆಯ ಮೇಲೆ ಪ್ರಕರಣಗಳು ದಾಖಲಾಗಿದೆ. ಈ ಕಾಯ್ದೆ ಅನ್ವಯ ಈಕೆಗೆ 1 ವರ್ಷಗಳ ಕಾಲ ಜಾಮೀನು ಸಿಗುವುದಿಲ್ಲ.

Click to comment

Trending

Exit mobile version