Uncategorized

ಕೇಂದ್ರ ಸರ್ಕಾರದ ಆದೇಶ ರಾಜ್ಯ ಸರ್ಕಾರಕ್ಕೆ ಅನ್ವಯಸುವದಿಲ್ಲವೇ ?

Published

on

1999 ರಲ್ಲಿ ವಾಜಪೇಯ್ ರವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲು, ಕೇವಲ ಒಂದೇ ಒಂದು ಮತದ ಕೊರತೆಯಿಂದ ಸರಕಾರವೇ ಪತನವಾಯಿತು. ಅದರಂತೆ ಭವಿಷ್ಯದಲ್ಲಿ ತಕ್ಕ ಉತ್ತರ ಕೊಡಲು ತಳವಾರ & ಪರಿವಾರ ಸಮುದಾಯದವರು ಸಿದ್ದರಾಗಬೇಕೆಂದು ಬುಯ್ಯಾರ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹುಚ್ಚಪ್ಪ ತಳವಾರ ಪತ್ರಿಕಾ ಹೇಳಿಕೆ ನಿಡಿದ್ದಾರೆ. ಕರ್ನಾಟಕ ರಾಜ್ಯ ದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ತಳವಾರ ಮತ್ತು ಪರಿವಾರ ಜನಾಂಗವಿದ್ದು, ಸದರಿ ಜನಾಂಗದ ಕುಲಶಾಸ್ತ್ರಿಯ ಅಧ್ಯಯನ ಕೈಗೊಂಡು, ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ 2004 ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಅದರ ಪ್ರಯುಕ್ತ ಕೇಂದ್ರ ಸರಕಾರವು ದಿನಾಂಕ20-03- 2020 ರಂದು ತಳವಾರ ಮತ್ತು ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆದೇಶ ಮಾಡಿತ್ತು. ಆದರೆ ಸರದಿ ಆದೇಶವನ್ನು ರಾಜ್ಯ ಸರಕಾರ ಜಾರಿಗೆ ತರುವಲ್ಲಿ ವಿಫಲವಾಗಿದೆ. ಕಾರಣ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರದ ಆದೇಶ ಗಣನೆಗೆ ತೆಗೆದು ಕೊಳ್ಳಲಾರದೇ ಸರದಿ ಜನಾಂಗಕ್ಕೆ ಅನ್ಯಾಯ ವೆಸಗುತ್ತಿದ್ದೆ. ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಪರಿಶೀಲನೆ ಮಾಡದೇ ಮತ್ತು ಸಕ್ಷೇಮ ಪ್ರಾಧಿಕಾರದ ನಡವಳಿಕೆಗಳನ್ನು ಗಾಳಿಗೆ ತೂರಿ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಜನಾಂಗದವರು ಗಂಗಾಮತ ಅಂಬಿಗ ತಳವಾರ ಎಂದು ಸುಳ್ಳು ಹೇಳಿ ಪ್ರಮಾಣ ಪತ್ರವನ್ನು ಕೊಡದೇ ವಿಳಂಬ ನೀತಿಯನ್ನು ಅನುಸರಿಸುವ ಜೊತೆಗೆ ಯಾರದೊ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ. ಸದರಿ ಜನಾಂಗಕ್ಕೆ ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಸಂವಿಧಾನ ಬದ್ದ ಅತ್ಯುನ್ನತ ಹುದ್ದೆಯಲ್ಲಿರುವ ಮಾನ್ಯ ಮುಖ್ಯ ಮಂತ್ರಿಗಳು ಸಂವಿಧಾನಕ್ಕೆ ದಕ್ಕೆ ಬರದಂತೆ ಈ ಸಮುದಾಯಗಳಿಗೆ ಎಸ್ಟಿ ಜಾತಿ ಪ್ರಮಾಣ ಪತ್ರ ನ್ಯಾಯ ಬದ್ದವಾಗಿ ಒದಗಿಸಿ, ರಾಷ್ಟ್ರದ ಸಂವಿಧಾನಕ್ಕೆ ಗೌರವ ಕಲ್ಪಸಿ ಕೊಡಬೇಕು ಈ ನೊಂದವರ ಶೋಷಿತರ ವರ್ಗಕ್ಕೆ ಸಾಮಾಜಿಕ ನ್ಯಾಯ ಕೊಡಬೇಕೆಂದು ವಿನಂತಿಸಿಕೊಂಡರು.

Click to comment

Trending

Exit mobile version