ಮಂಡ್ಯ

ಕಾರ್ಪೊರೇಟ್ ಲೂಟಿಗೆ ಸರ್ಕಾರ ಎಂದಿಗೂ ಕೈಜೋಡಿಸಬಾರದು..

Published

on

ಮಂಡ್ಯ: ವಿವಿದ ಹಕ್ಕುಗಳು ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಟಿಯು ವತಿಯಿಂದ ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭರತ್ ರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ಪ್ರಧಾನಿ ಮೋದಿ ವಿರುದ್ದ ಘೋಷಣೆ ಕೂಗಿದರು. ಸರ್ಕಾರ ಜನಗಳ ಜೊತೆ ನಿಂತು ಜನತೆಯ ಹಾಗೂ ದೇಶದ ಆರ್ಥಿಕ ಸಂಕಷ್ಟ ಹಾಗೂ ಆರೋಗ್ಯದ ರಕ್ಷಣೆಗೆ ತೊಡಗಬೇಕೆ ಹೊರತು, ಕಾರ್ಫೋರೇಟ್ ಕಂಪನಿಗಳ ಲೂಟಿಗೆ ಸರ್ಕಾರ ಕೈಜೋಡಿಸಬಾರದು,ಕೋವಿಡ್ 19 ಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಜನದ್ರೋಹಿ ತಿದ್ದುಪಡಿ ಕಾಯ್ದೆಗಳನ್ನು ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ಸಂಸ್ಥೆಗಳ ಖಾಸಗೀಕರಣವನ್ನು ತಡೆಯಬೇಕೆಂದು ಒತ್ತಾಯಿಸಿದರು. ಇನ್ನೂ ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ದೇಶದ ಎಲ್ಲಾ ಕುಟುಂಬಗಳಿಗೆ ಕೋವಿಡ್ 19 ಸಮಸ್ಯೆ ಇತ್ಯರ್ಥವಾಗುವರೆಗೂ ಮಾಸಿಕ 7500 ರೂ ನೇರವು ಘೋಷಿಸಬೇಕು. ಎಂದು 9 ಮನವಿಗಳ ಬೇಡಿಕೆಯನ್ನು ತಹಸೀಲ್ದಾರ್ ಚಂದ್ರಮೌಳಿ ರವರಿಗೆ ಭರತ್ ರಾಜ್ ಸಲ್ಲಿಸಿದರು.

Click to comment

Trending

Exit mobile version