ತುಮಕೂರು

ತುಮಕೂರಿನಲ್ಲಿ ನಿಲ್ಲದ ಮರಣ ಮೃದಂಗ..!

Published

on

ತುಮಕೂರು: ತುಮಕೂರು ಜಿಲ್ಲೆಯಲ್ಲಿ 59 ಜನರಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಶುಕ್ರವಾರ ಮೂವರು ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 38ಕ್ಕೆ ಏರಿದೆ. ತುಮಕೂರು- 22, ಗುಬ್ಬಿ- 7, ಕುಣಿಗಲ್- 5, ಮಧುಗಿರಿ- 8, ಪಾವಗಡ-1 ಶಿರಾ- 1, ತಿಪಟೂರು- 7, ಚಿಕ್ಕನಾಯಕನಹಳ್ಳಿ- 2, ಕೊರಟಗೆರೆ- 1,ತುರುವೇಕೆರೆ- 5,ಒಟ್ಟು ತಾಲ್ಲೂಕಿನಲ್ಲಿ 59 ಕೇಸ್ ಪತ್ತೆಯಾಗಿವೆ. ಇಂದು 35 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 523 ಮಂದಿ ಗುಣಮುಖರಾಗಿದ್ದು, 430 ಮಂದಿ ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ತುಮಕೂರು ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸರಣಿ ಮುಂದುವರೆದಿದ್ದು ಎಲ್ಲರನ್ನೂ ಆತಂಕಕ್ಕೆ ಎಡೆಮಾಡಿದೆ.

ಎಕ್ಸ್ ಪ್ರೆಸ್ಸ್ ಟಿವಿ ಬೆಂಗಳೂರು

Click to comment

Trending

Exit mobile version