ಮಂಡ್ಯ

ಮಳವಳ್ಳಿಯಲ್ಲಿ ಹೆಚ್ಚಾಗ್ತಾಯಿದೆ ಕೊರೊನಾ ಸೋಂಕು..

Published

on

ಮಳವಳ್ಳಿ:ಕೊರೊನಾ ಸೋಂಕು ಮಳವಳ್ಳಿಯನ್ನು ಬೆಂಬಿಡದೆ ಕಾಡ್ತಾಯಿದೆ. ದಿನೇ ದಿನೇ ನೂರಾರು ಜನರಿಗೆ ಸೋಂಕು ಹರಡುತ್ತಿದ್ದು ಇಂದು ಮಳವಳ್ಳಿಯ ಟೌನ್ ಪೋಲಿಸ್ ಠಾಣೆಯ ಪೇದೆಗೂ ಸೋಂಕು ವಕ್ಕರಿಸಿದೆ. ತಾಲ್ಲೂಕಿನಲ್ಲಿ ಇದುವರೆಗೂ 134ಮಂದಿಗೆ ಕೊರೊನಾ ಸೋಂಕು ದೃಡವಾಗಿದ್ದು, 80 ಮಂದಿ ಗುಣಮುಖರಾಗಿ ಹೊರಬಂದಿದ್ದಾರೆಂದು ಆರೋಗ್ಯ ಇಲಾಖೆ ತಿಳಿಸಿದೆ.ಇಂದು ಪೋಲಿಸ್ ಪೇದೆ ಸೇರಿ 4 ಮಂದಿ ಹಾಗೂ ಕಲ್ಕುಣಿ ಗ್ರಾಮದಲ್ಲಿ -7, ಸುಜ್ಜಲೂರು ಗ್ರಾಮದಲ್ಲಿ-1, ನೆಲ್ಲೂರು ಗ್ರಾಮದಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದ್ದು ಈ 13 ಸೋಂಕಿತರನ್ನು ಮಂಡ್ಯ ಜಿಲ್ಲೆಯ ಮಿಮ್ಸ್ ಆಸ್ಪತ್ರೆಗೆ ದಾಳಲಿಸಲಾಗಿದೆ. ಪೋಲಿಸ್ ಪೇದೆಗೆ ಸೋಂಕು ದೃಡಪಟ್ಟ ಹಿನ್ನೆಲೆ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.ಮೊದಲ ಬಾರಿಗೆ ಮಳವಳ್ಳಿ ಪಟ್ಟಣದಲ್ಲಿ 20 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರೂ ಗುಣಮುಖರಾಗಿದ್ದರು ,ಆದರೆ ಈಗ ಮತ್ತೆ ಮಳವಳ್ಳಿ ಪಟ್ಟಣದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಿದೆ. ಕೋವಿಡ್ 19 ತಡೆಗಟ್ಟಲು ತಾಲ್ಲೂಕು ಆಡಳಿತ ಮಂಡಳಿ ಮೊದಲು ಕಾಳಜೀ ವಹಿಸಿದ ರೀತಿ ಈ ಬಾರೀ ವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.ಇನ್ಮುಂದೆಯಾದ್ರು ತಾಲ್ಲೂಕು ಆಡಳಿತ ಮಂಡಳಿ ಕೊರೊನಾ ನಿಯಂತ್ರಣಮಾಡಲು ಕ್ರಮಕೈಗೊಳ್ಳಬೇಕು ಎಂಬುದು ಜನರ ಕೊರಿಕೆಯಾಗಿದೆ.

Click to comment

Trending

Exit mobile version