ಮಂಡ್ಯ

ಮಳವಳ್ಳಿಯಲ್ಲಿ ಮುಂದುವರೆದ ಕೋರೋನಾ ಆರ್ಭಟ..!!

Published

on

ಮಂಡ್ಯ:ಮಳವಳ್ಳಿ ಪಟ್ಟಣದ ಎನ್ ಇ ಎಸ್ ಬಡಾವಣೆಯ 3 ವರ್ಷದ ಗಂಡುಮಗು,6 ವರ್ಷದ ಬಾಲಕಿ,26 ವರ್ಷದ ಯುವಕ,34 ವರ್ಷದ ಮಹಿಳೆ, 60 ವರ್ಷದ ವೃದ್ದ ಸೇರಿದಂತೆ ಒಂದೇ ಕುಟುಂಬದವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ ಅದೇ ಬಡಾವಣೆಯ ಮತ್ತೊಬ್ಬ ಮಹಿಳೆಗೂ ಸೋಂಕು ತಗುಲಿದೆ..ಇನ್ನು ಮಳವಳ್ಳಿತಾಲ್ಲೂಕಿನ ಕಿರುಗಾವಲಿನಲ್ಲಿ ಒಬ್ಬರಿಗೆ, ಚಿಕ್ಕಮೂಲಗೂಡು ಗ್ರಾಮದಲ್ಲಿ 3 ಮಂದಿಗೆ, ಹಲಗೂರಿನಲ್ಲಿ ಒಬ್ಬರಿಗೆ , ಶಿಂಷಾಪುರದಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಇದರೊಂದಿಗೆ ಮಳವಳ್ಳಿ ತಾಲ್ಲೂಕಿನಲ್ಲಿ ಸುಮಾರು 148 ಮಂದಿಯಲ್ಲಿ ಸೋಂಕು ಏರಿಕೆ ಕಂಡಿದ್ದು, 80 ಕ್ಕೂ ಹೆಚ್ಚು ಮಂದಿ ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ನಿನ್ನೆಯಿಂದ ರಾಪಿಡ್ ಪರೀಕ್ಷೆ ನಡೆಸಲು ತಾಲ್ಲೂಕು ಆಡಳಿತ ಮುಂದಾಗಿದೆ ನಿನ್ನೆ ಪೊಲೀಸ್ ಪೇದೆಗೂ ಸೋಂಕು ದೃಡವಾದ ಹಿನ್ನಲೆಯಲ್ಲಿ ಮಳವಳ್ಳಿ ಪಟ್ಟಣದ ಇನ್ಸ್ ಪೆಕ್ಟರ್ ಸೇರಿದಂತೆ ಎಲ್ಲಾ ಸಿಬ್ಬಂದಿಗೂ ಕೋವಿಡ್ standing kickback lunges 19 ಪರೀಕ್ಷೆ ನಡೆಸಿದ್ದು , 31 ಮಂದಿಗೂ ನೆಗಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕೋರೋನಾ ಆರ್ಭಟ ಹೆಚ್ಚಾಗುತ್ತಿದ್ದು , ತಾಲ್ಲೂಕು ಆಡಳಿತ ಹೇಗೆ ನಿಯಂತ್ರಣ ಮಾಡುತ್ತದೆ ಅನ್ನೋದನ್ನ ಕಾದುನೋಡಬೇಕಾಗಿದೆ.

Click to comment

Trending

Exit mobile version