ಸಿನಿಮಾ

ರೆಟ್ರೋ ಲುಕ್ ನಲ್ಲಿ ಬಂದ ರಾಬರ್ಟ್..!!

Published

on

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುಂದಿನ ಸಿನಿಮಾ ರಾಬರ್ಟ್ ಚಿತ್ರ ತಂಡದಿಂದ ಕಲರ್ ಫುಲ್ ಆಗಿರುವ ಚಕ್ರವರ್ತಿಯ ಹೊಸ ಲುಕ್ ಝಗಮಗಿಸುತ್ತಿದೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿರುವ ಯಜಮಾನ, ಉಮಾಪತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಹಾರೈಸಿ, ಪೋಸ್ಟರ್ ಹಂಚಿಕೊಂಡಿದ್ದಾರೆ. ಪಕ್ಕಾ ರೆಟ್ರೋ ಲುಕ್, ಕೈಯಲ್ಲೊಂದು ಸಿಗರೇಟ್, ಕೆಂಪು ಕನ್ನಡ, ಮುಂದೊಂದು ಮೈಕ್, ಪಕ್ಕದಲ್ಲೊಂದು ಗಿಟಾರ್ ಇಟ್ಟುಕೊಂಡು ವಿರಾಜಮಾನವಾಗಿರು ಚಕ್ರವರ್ತಿಗೆ ಅಭಿಮಾನಿಗಳು ಉಘೇ ಉಘೇ ಅನ್ನುತ್ತಿದ್ದಾರೆ.
ಅಶ್ವಿನಿ ಭಟ್, ಎಕ್ಸ್ ಪ್ರೆಸ್ ಟಿವಿ, ಬೆಂಗಳೂರು

Click to comment

Trending

Exit mobile version