Uncategorized

ಬಿಸಿಯೂಟದ ಜೊತೆಗೆ ಇನ್ಮುಂದೆ ಹಾಲಿನ ಪುಡಿ ವಿತರಣೆ..!

Published

on

ಕೋಲಾರ: ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮನೆಗೆ ಬಿಸಿಯೂಟದ ದಿನಸಿ ಕಿಟ್ ಜೊತೆಗೆ ಹಾಲು ಪುಡಿ ಪೂರೈಸುವಂತೆ ಸರ್ಕಾರಕ್ಕೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆವೈ ನಂಜೇಗೌಡ ಅವರು ಒತ್ತಾಯ ಮಾಡಿದ್ರು. ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದೇಶದ ಹಲವು ಉದ್ಯಮಗಳ ಮೇಲೆ ಕೋವಿಡ್ ಕರಿನೆರಳು ಬಿದ್ದಿದೆ. ಈ ಪೈಕಿ ಹೈನೋದ್ಯಮವೂ ಒಂದಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳು ಇದೀಗ ಬಂದ್ ಆಗಿರೋದ್ರಿಂದ ಅಲ್ಲಿಗೆ ಪೂರೈಕೆಯಾಗ್ತಿದ್ದ ಹಾಲು ಸ್ಥಗಿತವಾಗಿದೆ. ಇದ್ರಿಂದಾಗಿ ಹಾಲು ಒಕ್ಕೂಟಗಳ ಕೋಟ್ಯಾಂತರ ರೂಪಾಯಿ ವಹಿವಾಟಿಗೆ ಬರೆ ಬಿದ್ದಿದೆ. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳ ಮನೆಗೆ ಹಾಲು ಪುಡಿಯನ್ನು ಪೂರೈಸಬೇಕೆಂದು ಒತ್ತಾಯ ಮಾಡಿದ್ರು. ಇನ್ನು ರಾಜ್ಯದಲ್ಲಿ ಹದಿಮೂರು ಹಾಲು ಒಕ್ಕೂಟಗಳಿವೆ. ಈ ಎಲ್ಲ ಒಕ್ಕೂಟಗಳಲ್ಲಿ ಸುಮಾರು 75ಲಕ್ಷ ಲೀಟರ್ ಹಾಲು ನಿತ್ಯವೂ ಸಂಗ್ರಹವಾಗ್ತಿದೆ. ನಮ್ಮ ರಾಜ್ಯ ಮಾತ್ರವಲ್ಲ, ನೆರೆ ರಾಜ್ಯ, ನೆರೆಯ ದೇಶಗಳಿಗೆ ಹಾಲು ಪೂರೈಸುವ ಆರ್ಥಿಕವಾಗಿ ಬಲಿಷ್ಟವಾಗಿದ್ದ ಹಾಲು ಒಕ್ಕೂಟಗಳು ಕೋವಿಡ್ ಕಾರಣಕ್ಕಾಗಿ ನಾಲ್ಕು ತಿಂಗಳಿನಿಂದೀಚೆಗೆ ಸೊರಗಿವೆ. ಎಲ್ಲ ಸಭೆ-ಸಮಾರಂಭಗಳು ರದ್ದಾಗಿರೋದ್ರಿಂದ ಹಾಲಿಗೆ ಮಾರುಕಟ್ಟೆಯಿಲ್ಲದೆ ಒಕ್ಕೂಟಗಳು ನಷ್ಟದಲ್ಲಿವೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಶಕಗಳಿಂದಲೂ ಬಿಸಿಯೂಟ ಕಾರ್ಯಕ್ರಮವು ಯಶಸ್ವಿಯಾಗಿ ನಡೆದುಕೊಂಡು ಬರ್ತಿದೆ. ಪ್ರಸ್ತುತ ಕೋವಿಡ್ ಕಾರಣಕ್ಕಾಗಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಆದ್ರೆ, ಬಿಸಿಯೂಟದ ದಿನಸಿ ಪದಾರ್ಥವು ಕಿಟ್ ನೀಡುವ ಮೂಲಕ ವಿದ್ಯಾರ್ಥಿಗಳ ಮನೆ ಸೇರುತ್ತಿದೆ. ಅದೇ ಮಾದರಿಯಲ್ಲಿ ಹಾಲು ಪುಡಿಯನ್ನೂ ವಿದ್ಯಾರ್ಥಿಗಳ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ರೆ ಒಕ್ಕೂಟಗಳಿಗೆ ಆಗ್ತಿರೋ ನಷ್ಟವನ್ನು ಕಡಿಮೆ ಮಾಡಬಹುದು. ಇನ್ನು ರೇಷನ್ ಜೊತೆಗೆ ಪ್ರತಿ ಮನೆಗೆ ಹಾಲಿನ ಪುಡಿ ಪ್ಯಾಕೇಟ್ನ್ನು ಸರ್ಕಾರ ನೀಡುವ ಹೊಸ ಯೋಜನೆ ಮಾಡಬಹುದೆಂದು ಸರ್ಕಾರಕ್ಕೆ ಸಲಹೆ ನೀಡಿದ್ರು.
ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Click to comment

Trending

Exit mobile version