ಮಂಡ್ಯ

ಅಕ್ರಮ ಕ್ರಷರ್ ಗಳಿಗೆ ಬಿತ್ತು ಬೀಗ…!

Published

on

ನಾಗಮಂಗಲ: ಒಂದು ಕಾಲದಲ್ಲಿ ರಾಜ್ಯ ರಾಜಕೀಯ ದಿಕ್ಸೂಚಿಯನ್ನೆ ಬದಲಾವಣೆ ಮಾಡಿದ್ದ ಗಣಿಗಾರಿಕೆ ಮಾಫಿಯಾ, ಈಗಲೂ ಅದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಾಧ್ಯಂತ ಅಲ್ಲಲ್ಲೆ ಸದ್ದು ಮಾಡುತ್ತಿದೆ. ವಿಶ್ವವಿಖ್ಯಾತ ಕೆ.ಆರ್. ಎಸ್. ಜಲಾಶಯಕ್ಕೆ ಕುತ್ತು ತರಬಹುದಾದ ಹಿನ್ನಲೆಯಲ್ಲಿ ಸಕ್ಕರೆಯ ನಾಡು ಮಂಡ್ಯ ಜಿಲ್ಲಾಧಿಕಾರಿಗಳು ಜಿಲ್ಲಾಧ್ಯಂತ ನಿಯಮಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆಯ ಕ್ರಷರ್ ಗಳನ್ನು ಸೀಜ್ ಮಾಡುವಂತೆ ನೀಡಲಾಗಿದ್ದ ಆದೇಶದಂತೆ ನಾಗಮಂಗಲ ತಹಸೀಲ್ದಾರ್ ನೇತೃತ್ವದಲ್ಲಿ ಒಟ್ಟು 13 ಕ್ರಷರ್ ಗಳ ಪೈಕಿ 7-ಅಕ್ರಮ ಕ್ರಷರ್ ಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ತಾಲ್ಲೂಕಿನ ಕಬ್ಬಿನಕೆರೆಯ ಶ್ರೀನಿವಾಸ, ವಡೆಯರಪುರದ ಬಸವೇಶ್ವರ, ಬೇಗಮಂಗಲದ ಕಾಲಭೈರವೇಶ್ವರ, ಗಂಗಸಮುದ್ರದ ಎಸ್.ಎಲ್.ವಿ., ಗೊಲ್ಲರಹಳ್ಳಿಯ ಸ್ವಾಮಿ ಅಯ್ಯಪ್ಪ & ಮಾರುತಿ ಹಾಗೂ ಇಜ್ಜಲಘಟ್ಟದ ಭೈರವೇಶ್ವರ ಎಂಬ ಹೆಸರುಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಗೆ ತಾತ್ಕಾಲಿಕ ತಡೆ ನೀಡುವ ಮೂಲಕ ಬೀಗ ಜಡಿಯಲಾಗಿದೆ. ಈ ಬಗ್ಗೆ ಮಾತನಾಡಿದ ತಹಸೀಲ್ದಾರ್ ಕುಂ ಞ ಅಹಮ್ಮದ್, ಜಿಲ್ಲಾಧಿಕಾರಿಗಳ ಆದೇಶದಂತೆ ಗಣಿ & ಭೂವಿಜ್ಞಾನ, ಅರಣ್ಯ, ವಾಯು ಮಾಲಿನ್ಯ ನಿಯಂತ್ರಣ ಹಾಗೂ ಸಂಬಂಧಿಸಿದ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಸೇರಿದಂತೆ ಸ್ಥಳೀಯ ಆರಕ್ಷಕ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ಅಕ್ರಮ ಕ್ರಷರ್ ಗಳಿಗೆ ಬೀಗ ಹಾಕಲಾಗಿದೆ. ನಿಯಮಾನುಸಾರ ಕಾನೂನು ಕ್ರಮವಾಗಿ ಪ್ರಾರಂಭಿಸದೆ, ಬೀಗದ ಮುದ್ರೆಯನ್ನು ತೆರವುಗೊಳಿಸಿ ಪುನಃ ಅಕ್ರಮವಾಗಿ ಪ್ರಾರಂಭಿಸಿದರೆ ತಪ್ಪಿತಸ್ಥ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಇನ್ನೂ ಈ ಬಗ್ಗೆ ಮಾತನಾಡಿದ ಜಿಲ್ಲಾ ಗಣಿ & ಭೂವಿಜ್ಞಾನ ಇಲಾಖೆಯ ಪ್ರಸನ್ನಕುಮಾರ್, ಸೀಜ್ ಮಾಡಲಾಗಿರುವ 07 ಕ್ರಷರ್ ಗಳಲ್ಲೂ ಅಕ್ರಮವಾಗಿ ಸಂಗ್ರಹಿಸಲಾಗಿರುವ ಜಲ್ಲಿ ಹಾಗೂ ಕಲ್ಲುಪುಡಿಗಳನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವ ಸಾಮಾಗ್ರಿಗಳನ್ನು ಅಕ್ರಮವಾಗಿ ಸಾಗಿಸುವುದು ಕಂಡು ಬಂದರೂ ಸೂಕ್ತ ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version