ಕೋಲಾರ

ನಗರಸಭೆ ಆಯುಕ್ತರಿಗೆ ಅಂಟಿದ ಕೊರೊನಾ..!

Published

on

ಕೋಲಾರ: ಕೋಲಾರ ನಗರದಲ್ಲಿ ದಿನೆದಿನೆ ಸರ್ಕಾರಿ ನೌಕರರಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಇದರಿಂದ ಭಯಗೊಂಡು ಇಲಾಖೆಯ ಕಚೇರಿಗಳಲ್ಲಿ ಕೆಲಸ ಮಾಡಲು ನೌಕರರು ಹಿಂಜರಿಯತ್ತಿದ್ದಾರೆ. ಅಬಕಾರಿ ಕಚೇರಿಯ ನಾಲ್ವರಿಗೆ ಕೊರೋನಾ ಸೋಂಕು ದೃಡವಾಗಿದೆ. ಅಬಕಾರಿ ಇನ್ಸ್‌ಪೆಕ್ಟರ್, ಗಾರ್ಡ್, ಇಬ್ಬರು ಕಂಪ್ಯೂಟರ್ ಆಪರೇಟರ್ ಗೆ ಸೋಂಕು ತಗಲಿದೆ. ಇನ್ನೂ ನಗರಸಭೆ ಕಚೇರಿಯ ಪೌರಾಯುಕ್ತರು ಹಾಗೂ ಆತನ ಪತ್ನಿಗೆ ಪಾಸಿಟಿವ್ ಬಂದಿದ್ದರಿಂದ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರದ ಅಬಕಾರಿ ಕೇಂದ್ರ ಕಚೇರಿ, ನಗರಸಭೆ ಕಚೇರಿ ಹಾಗೂ ಗಲ್ ಪೇಟೆ ಪೊಲೀಸ್ ಠಾಣೆ ಕಚೇರಿಯನ್ನು 3ದಿನದ ಮಟ್ಟಿಗೆ ಸೀಲ್ ಡೌನ್ ಮಾಡಲಾಗಿದೆ.. ನಗರಸಭೆ ಪೌರಾಯುಕ್ತರಿಗೆ ಕೊರೋನಾ ಖಚಿತವಾಗುತ್ತಿದ್ದಂತೆ ಹಲವು ಇಲಾಖೆಗಳ ಆಧಿಕಾರಿಗಳಿಗೆ ಆತಂಕ ಎದುರಾಗಿದ್ದು ಕೆಲಸ ಮಾಡಲು ನಿರಾಕರಿಸುತ್ತಿದ್ದಾರೆ.

Click to comment

Trending

Exit mobile version