ಶಿರಾ

ಬಕ್ರೀದ್ ಹಬ್ಬದ ನಿಮಿತ್ತ ಪೋಲಿಸರಿಂದ ಶಾಂತಿ ಸಭೆ..!

Published

on

ಶಿರಾ:- ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಕ್ರೀದ್ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರದ ಆದೇಶದಂತೆ ಮಸೀದಿಗಳಲ್ಲಿ ಕನಿಷ್ಠ 50 ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾಂಪ್ರದಾಯಕವಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಶಿರಾ ಉಪ ವಿಭಾಗ ಡಿವೈಎಸ್ಪಿ ಕುಮಾರಪ್ಪ ತಿಳಿಸಿದರು.ಬಕ್ರೀದ್ ಹಬ್ಬದಂದು ಮನೆಯಲ್ಲೇ ಪ್ರಾರ್ಥನೆ ಸಲ್ಲಿಸಿ, ಕೊರೊನಾ ಸೋಂಕು ಹಬ್ಬುವುದನ್ನು ತಡೆಗಟ್ಟಲು ನಿಮ್ಮೆಲ್ಲರ ಸಹಕಾರ ಅತ್ಯವಶ್ಯಕವಾಗಿದೆ. ಪ್ರಮುಖ ಮಸೀದಿ, ದೇವಾಲಯಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗುವುದು, ಹಾಗೂ ನಿಷೇಧಿತ ಪ್ರಾಣಿಗಳ ವಧೆ ಮಾಡುವಂತಿಲ್ಲ, ಅಂತಹ ಘಟನೆ ಕಂಡು ಬಂದರೆ ಶಾಂತಿ ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು, ಸಾಮೂಹಿಕವಾಗಿ ಹಾಲ್ ಗಳಲ್ಲಿ ದೊಡ್ಡ ಕಟ್ಟಡಗಳಲ್ಲಿ ಪ್ರಾರ್ಥನೆಯನ್ನು ಮಾಡಬಾರದು.ಸರ್ಕಾರದ ನಿಯಮವನ್ನು ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಂತಿ ಸಭೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಿದ್ಧಾರ್ಥ್ ಹಾಗೂ ಡಿವೈಎಸ್ಪಿ ಕುಮಾರಪ್ಪ ತಿಳಿಸಿದರು..

Click to comment

Trending

Exit mobile version