ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಹೂ-ಹಣ್ಣಿನ ಬೆಲೆ ಏರಿಕೆ.. ಜನರ ಜೇಬಿಗೆ ಕತ್ತರಿ..!

Published

on

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ನಗರದೆಲ್ಲೇಡೆ ಹೂ ಹಣ್ಣಿನ ವ್ಯಾಪಾರ ವಹಿವಾಟು ಜೋರಾಗಿದೆ. ಹಬ್ಬ ಅಂದ್ರೆ ಕೇಳ್ಬೇಕಾ ಜನರು ಸಂಭ್ರಮ ಸಡಗರದಿಂದ ಹಬ್ಬದ ತಯಾರಿ ನಡೆಸುತ್ತಾ ಇರ್ತಾರೆ. ಪ್ರತಿ ವರ್ಷ ಕೆ.ಆರ್ ಮಾರುಕಟ್ಟೆ ರಸ್ತೆ ಉದ್ದಕ್ಕೂ ಜನಜಂಗುಳಿಯಿಂದ ತುಂಬಿ ತುಳುಕಾಡುತ್ತಾ ಇತ್ತು. ಆದ್ರೆ ಈ ಬಾರಿಯ ಕೊರೊನಾದಿಂದ ಕೆ.ಆರ್ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ. ಅಲ್ಲಲ್ಲಿ ಚಿಕ್ಕ-ಪುಟ್ಟ ಹೂ ಹಣ್ಣು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವವರ ಅಂಗಡಿಗಳಲ್ಲಿ ಬೆಲೆ ಕೇಳಿದರೆ ತಲೆ ತಿರುಗಿ ಬೀಳುವುದೆಂತು ಸತ್ಯ .ಜನ್ರಿಗೆ ಕೊರೊನಾದ ಹೊಡೆತ ಒಂದು ಕಡೆಯಾದ್ರೆ, ಹೂ ಹಣ್ಣಿನ ಬೆಲೆ ಏರಿಕೆಯ ಹೊಡೆತ ಮತ್ತೊಂದು ಕಡೆ. ಮಾರುಕಟ್ಟೆ ಇಲ್ಲದ ಕಾರಣ ಹೂವಿನ ಆಮದು ಕೊಂಚಮಟ್ಟಿಗೆ ಕಡಿಮೆಯಾಗಿದ್ದು ಇದರಿಂದ ಹೂವಿನಲ್ಲಿ ಬೆಲೆ ಕೊಂಚ ಮಟ್ಟಿಗೆ ಏರಿಕೆಯಾಗಿದೆ. ಪ್ರತಿ ಬಾರಿ ಕೆ.ಜಿ 500ರೂಪಾಯಿಗೆ ಮಾರಾಟವಾಗುತ್ತಿದ್ದ ಕನಕಾಂಬರ ಹೂವಿನ ಬೆಲೆ ಈ ಬಾರಿ 1400 ರೂಪಾಯಿಗೆ ಏರಿಕೆಯಾಗಿದೆ. ಕನಕಾಂಬರ ಅಷ್ಟೇ ಅಲ್ಲದೇ ಸೇವಂತಿಗೆ-300,ಮಲ್ಲಿಗೆ-400,ಗುಲಾಬಿ-250,ತಾವರೆ ಒಂದಕ್ಕೆ 20 ರೂಪಾಯಿ ಜೊತೆಗೆ ಹಣ್ಣಿನ ಬೆಲೆಯಲ್ಲೂ ಏರಿಕೆಯಾಗಿದೆ. ಸೀಬೆ ಹಣ್ಣು-70, ಸೇಬು-1140,ದ್ರಾಕ್ಷ್ಮಿ-80,ಸೀತಾಫಲ-60 ಹೀಗೆ ಎಲ್ಲಾ ಹೂ ಹಣ್ಣುಗಳ ಬೆಲೆ ಏರಿಕೆಯಾಗಿದೆ. ಬೆಲೆ ಅದೇಷ್ಟೆ ಆದ್ರೂ ಪರವಾಗಿಲ್ಲ ಹಬ್ಬವನ್ನು ಮಾತ್ರ ಸಂಭ್ರಮ ಸಡಗರದಿಂದ ಆಚರಣೆ ಮಾಡಬೇಕು ಎಂದು ಎಲ್ಲರೂ ಹಬ್ಬಕ್ಕೆ ತಯಾರಿ ನಡೆಸುತ್ತಾಯಿದ್ದಾರೆ.

ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version