ಕೋಲಾರ

ಕೆಜಿಎಫ್ ಶಾಸಕಿಯಿಂದ ಕೆರೆ ಶುದ್ಧಿಕರಣ ಕಾರ್ಯ…! ಇದರ ಹಿಂದೆ ಯಾವುದೇ ರಾಜಕೀಯ ಕುಂತತ್ರ ಇಲ್ವಂತೆ..?

Published

on

ಮುಳಬಾಗಿಲು: ಕೋಲಾರ ಜಿಲ್ಲೆಯ ಎರಡನೇ ಅತಿದೊಡ್ಡ ಕೆರೆಯಾಗಿರುವ ಕೆಜಿಎಫ್ ತಾಲೂಕಿನ ಬೇತಮಂಗಲ ಪಾಲಾರ್ ಕೆರೆ ಶುದ್ದೀಕರಣ ಕಾರ್ಯ ಬರದಿಂದ ಸಾಗಿದೆ, ಕಳೆದ 15 ದಿನಗಳಿಂದ ಕೆಜಿಎಪ್ ಶಾಸಕಿ ರೂಪಕಲಾ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಕೆರೆಯಲ್ಲಿನ ಜಾಲಿನರಗಳನ್ನ ಜೆಸಿಬಿಗಳ ಸಹಾಯದಿಂದ ತೆರವು ಮಾಡಿಸುತ್ತಿದ್ದು, ಶೇಖಡಾ 70 ರಷ್ಟು ಕೆರೆಯ ಶುದ್ದೀಕರಣ ಕಾರ್ಯ ಮುಕ್ತಾಯವಾಗಿದೆ. ಕಳೆದೊಂದು ವಾರದಿಂದ ಬೇತಮಂಗಲ ಹೋಬಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜೆಸಿಬಿ ಕೆರೆಗೆ ಇಳಿದು ಕಾರ್ಯಾಚರಣೆ ಮಾಡಲು ಅಡಚಣೆ ಉಂಟಾಗಿತ್ತು, ಹೀಗಾಗಿ ಕೆರೆಯ ಹಿಂಬದಿಯಿಂದ ಜೆಸಿಬಿಗಳನ್ನ ಇಳಿಸಿ ಮತ್ತೆ ಶುದ್ದೀಕರಣ ಕಾರ್ಯ ಆರಂಭಿಸಲಾಗಿದೆ, ಸ್ಥಳಕ್ಕೆ ಕೆಜಿಎಪ್ ಶಾಸಕರಾದ ರೂಪಕಲಾ ಭೇಟಿ ನೀಡಿ ಗಿಡಗಂಟೆಗಳ ತೆರವು ಕಾರ್ಯ ವೀಕ್ಷಿಸಿದರು, ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ಬೆಂಬಲಿಗರು ಹಾಜರಿದ್ದರು,ಇನ್ನು ಕೆಸಿ ವ್ಯಾಲಿ ನೀರು ಬಂಗಾರಪೇಟೆ ತಾಲೂಕು ಪ್ರವೇಶ ಮಾಡಿದ್ದು ಮುಂದೆ ಬೇತಮಂಗಲ ಕೆರೆಗೂ ನೀರು ಹರಿಯಲಿದೆ, ಹೀಗಾಗಿ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಬೋರ್ ವೆಲ್ ಗಳಲ್ಲಿ ಅಂತರ್ಜಲ ವೃದ್ದಿಯಾಗಿ ನೀರು ಸಿಗುವ ಭರವಸೆ ಮೂಡಿದೆ, ಕೆರೆಯಲ್ಲಿನ ಗಿಡಗಂಟೆಗಳು ತೆರವು ಮಾಡಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆ ಅಗುವುದರ ಜೊತೆಗೆ, ನೀರು ಹೆಚ್ಚು ಕಾಲ ಉಳಿಯಲಿದೆ, ಈ ಕುರಿತು ಮಾತನಾಡಿರುವ ಶಾಸಕಿ ರೂಪಕಲಾ ಅವರು, ರೈತರ ಬಯಕೆಯಂತೆ ಕೆರೆ ಶುದ್ದೀಕರಣ ಕಾರ್ಯ ಆರಂಭಿಸಿದ್ದೇವೆ, ರೈತರ ಹಿತ ಕಾಯಲು ಇದೊಂದು ಪ್ರಯತ್ನವಾಗಿದೆ, ರೈತರ ಬೆನ್ನೆಲುಬಾಗಿ ಇಂತಹದೊಂದು ಅವಕಾಶ ಸಿಕ್ಕಿದೆ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದ್ದಾರೆ.

Click to comment

Trending

Exit mobile version