ಕಲಬುರಗಿ

ತಳವಾರ ಮತ್ತು ಪರಿವಾರ ಜಾತಿಗಳಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕು…!

Published

on

ಕಲಬುರಗಿ: ಭಾರತ ಸಂವಿಧಾನದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಜನಗಳ ಅಭಿವೃದ್ಧಿಗಾಗಿ ಮೀಸಲಾತಿ ಎನ್ನುವ ವಿಶೇಷ ಪ್ರಾತಿನಿಧ್ಯ ನೀಡುವುದರ ಮುಖಾಂತರ ಜನಗಳನ್ನು ಮೇಲೆತ್ತುವ ಸಲುವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಕೊಟ್ಟಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರ್ಕಾರವು ‘ಕೇಂದ್ರ ಕರ್ನಾಟಕದ OBC ಪಟ್ಟಿಯಲ್ಲಿನ ಕ್ರ.ಸಂಖ್ಯೆ 6 ರಲ್ಲಿ ಮತ್ತು ರಾಜ್ಯ ಸರ್ಕಾರದ OBC ಪಟ್ಟಿಯಲ್ಲಿನ ಕ್ರ.ಸಂಖ್ಯೆ 88 ನಲ್ಲಿ ಇರುವ ತಳವಾರ ಪರಿವಾರ ಜಾತಿಗಳು ಈಗಾಗಲೇ ಎಸ್ ಟಿ ಪಟ್ಟಿಯಲ್ಲಿ ಇರುವ ನಾಯಕ, ನಾಯ್ಕಡ ಜಾತಿಯ ಸಮಾನಾರ್ಥಕ ಪದಗಳು, ಹಾಗಾಗಿ ಇವುಗಳನ್ನು ಎಸ್ ಟಿ ಗೆ ಸೇರಿಸಬೇಕೆಂದು, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪ್ರಸ್ತಾವನೆ ಮಾನ್ಯ ಮಾಡಿದ ಕೇಂದ್ರ ಸರ್ಕಾರ ದಿನಾಂಕ 12-02-2020 ರಲ್ಲಿ ಸದರಿ ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದನೆ ಪಡೆದು, ನಂತರ ರಾಷ್ಟ್ರಪತಿಗಳ ಅಂಕಿತ ಪಡೆದು ಕೇಂದ್ರ ಸರ್ಕಾರ ಗೆಝೆಟ್ ಪ್ರಕಟಿಸಿ, ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಎಸ್ ಟಿ ಪಟ್ಟಿಯಲ್ಲಿನ ಕ್ರ.ಸಂಖ್ಯೆ 38 ರಲ್ಲಿ ನಾಯಕ ನಾಯ್ಕಡ ಪದಗಳ ಬದಲಾಗಿ ಪರಿವಾರ ಮತ್ತು ತಳವಾರ ಒಳಗೊಂಡಂತೆ ಎಂದು ತಿದ್ದುಪಡಿ ಮಾಡಿ ಆದೇಶಿಸಿದೆ.ತಳವಾರ ಎಂಬ ಪದವು ಎಲ್ಲಿಯೂ ಕೂಡ ಒಂದು ಜಾತಿಗೆ ಸೇರಿಕೊಂಡಂತೆ ಇಲ್ಲ ಅದು ಒಂದು ಸ್ವತಂತ್ರವಾದ ಪದವಾಗಿದೆ ಹೀಗಿದ್ದರೂ ಕೂಡ ರಾಜಕೀಯ ಪ್ರೇರಿತವಾಗಿ ತಳವಾರ ಪರಿವಾರ ಜಾತಿಗಳಿಗೆ ಸಿಗಬೇಕಾದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರದ ಗೆಝೆಟ್ ಇದ್ದರೂ ಕೂಡ ಕಾನೂನು ಉಲ್ಲಂಘನೆ ಮಾಡಿ ತಳವಾರ ಪರಿವಾರ ಜಾತಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ.ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಡಿರುವ ತಪ್ಪನ್ನು ಸರಿಪಡಿಸಿ ತಳವಾರ ಪರಿವಾರ ಜಾತಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಇಲ್ಲದಿದ್ದರೆ ಮುಂದೆ ಕಾನೂನಾತ್ಮಕವಾಗಿ, ಪ್ರತಿಭಟನೆಗಳ ಮುಖಾಂತರ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಾಗುತ್ತದೆ ಎಂದು ಶಿವಕುಮಾರ ಗುಡುಗಿದ್ದಾರೆ.

ವರದಿ:ಈರಣ್ಣ ವಗ್ಗೆ ವರದಿಗಾರರು ಅಫಜಲಪೂರ

Click to comment

Trending

Exit mobile version