ವಿಜಯಪುರ

ಸ್ಪರ್ಶ್ಯ ಜಾತಿಗಳನ್ನು ಕೈಬೀಡಬೇಕು ಎಂದು ಮಿನಿ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ..!

Published

on

ವಿಜಯಪುರ: ಸುಪ್ರೀಂ ಕೊರ್ಟ್ ನಿರ್ದೇಶನದಂತೆ ಸ್ಪರ್ಶ ಜಾತಿಗಳನ್ನು ಕೈ ಬೀಡಿ ಎಂದು ನಿಂಬೆ ನಾಡಿನ ಇಂಡಿ ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮೂಲ ಅಸ್ಪರ್ಶ್ಯ ಜಾತಿಗಳ ಒಕ್ಕೂಟದಿಂದ ಕೊರಮ, ಕೊರಚ, ಭೋವಿ, ಲಂಬಾಣಿ ಜಾತಿಗಳಿಗೆ ಪರಿಶಿಷ್ಟ ವರ್ಗದ ಪಟ್ಟಿಯಿಂದ ಕೈ ಬಿಡಬೇಕು. ಸ್ವತಂತ್ರ್ಯ ಸಿಕ್ಕಿನಿಂದಾಗಲೂ ಮೂಲ ಅಸ್ಪರ್ಶ್ಯ ಜಾತಿಗಳಾದ ಮಾದಿಗ, ಹೊಲೇರ,ಢೋರ್, ಸಮಗಾರ, ಮಚಗಾರ ಜಾತಿಯವರಿಗೆ ಸರ್ಕಾರದಿಂದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅನ್ಯಾಯವಾಗಿದೆ. ಕೂಡಲೇ ಘನವೆತ್ತ ಸರಕಾರ ಸ್ಪರ್ಶ್ಯ ಜಾತಿಗಳನ್ನ ಕೈ ಬಿಡಬೇಕು. ಒಂದು ವೇಳೆ ನೀರಾಸಕ್ತಿ ತೋರಿಸಿದ್ರೆ ಮುಂದಿನ ಉಗ್ರ ಹೋರಾಟಕ್ಕೆ ಮತ್ತು ಹಾನಿಗಳಿಗೆ ನೇರವಾಗಿ ಸರ್ಕಾರವೇ ಹೊಣೆಯಾಗುತ್ತೆ ಎಂದು ಅಸ್ಪರ್ಶ್ಯ ಜಾತಿಗಳ ಒಕ್ಕೂಟ ಅಧ್ಯಕ್ಷ ಸೋಮಶೇಖರ್ ಮ್ಯಾಕೇರಿ ಕಂದಾಯ ಇಲಾಖೆ ತಹಶಿಲ್ದಾರ ಸಿ.ಎಸ್.ಕುಲಕರ್ಣಿಯವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವರದಿ: ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್

Click to comment

Trending

Exit mobile version