ಲಿಂಗಸೂಗೂರು

ಶ್ರೀಮಾರತಿ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ…

Published

on

ಲಿಂಗಸುಗೂರ:ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ನಡೆಯಲಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.ಸದ್ಯ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು,ಇತ್ತ ಲಿಂಗಸುಗೂರ ತಾಲ್ಲೂಕಿನ ಶ್ರೀ ಮಾರತಿ ದೇವಸ್ಥಾನದಲ್ಲಿ ಕೂಡ ಹಬ್ಬದ ಸಡಗರ ಮನೆ ಮಾಡಿದೆ.ಶ್ರೀ ರಾಮ ರಕ್ಷಾ ಹೋಮ ಹವನ ಪೂಜಾ ವಿಧಿವಿಧಾನಗಳನ್ನು ಏರ್ಪಡಿಸುವ ಮೂೆಲಕ ಸಮಸ್ತ ಹಿಂದೂ ಪರ ರಾಷ್ಟ್ರೀಯ ಸಂಸತ್,ಹಿಂದೂ ಜಾಗರಣ ವೇದಿಕೆ ಸಂಘಟನೆ,ಬಿಜೆಪಿ ಕಾರ್ಯಕರ್ತರು ಹಲವು ಭಕ್ತರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮದ ರಾಮಜಪ ಮಾಡಲಾಗಿತ್ತು.ನಿನ್ನೆ ಸಂಜೆಯಿಂದಲ್ಲೆ ಸಮಸ್ತ ರಾಮ ಭಕ್ತರ ಸಂಘಗಳು ಎಲ್ಲಾ ದೇವಸ್ಥಾನಗಳ ಮೇಲೆ ಭಗವಾನ ಧ್ವಜಗಳನ್ನು ಹಾರಿಸುವ ಮೂಲಕ ವಿಜಯ ಅಯೋಧ್ಯೆ ದಿಗ್ವಿಜಯ ಪತಾಕೆಯ ಸಂದೇಶ ನೀಡಿದ್ದಾರೆ.ಸಮಾರಂಭವನ್ನು ನೇರವೆರಿಸಿ ಮಾತನಾಡಿದ ಜಿಲ್ಲಾ ಕಾರ್ಯವಾಹ ಪಾಂಡುರಂಗ ಆಪ್ಪೇ ಮಾತನಾಡಿ..ರಾಮ ಮಂದಿರ ಬರೀ ಕಟ್ಟಡ ಅಲ್ಲ ಇದೊಂದು ಆರಾಧ್ಯ ಜನ್ಮಭೂಮಿ.ಹಿಂದೂ ಧರ್ಮದ ಭವ್ಯ ಶಿಲಾನ್ಯಾಸದ ಪುಣ್ಯಕ್ಷೇತ್ರ…ಆಯೊಧ್ಯೆ ಶಿಲಾನ್ಯಾಸ ಪೂರ್ಣಗೊಂಡ ನಂತರ ಎಲ್ಲರೂ ಮನೆಯಲ್ಲಿ ದೀಪ ಹಚ್ಚು ಮೂಲಕ ದೀಪಾವಳಿಯ ಸಂಭ್ರಮ ಸಡಗರ ಆಚರಿಸೋಣ ಎಂದರು.ಸಮಾರಂಭ ಮುಗಿಯುತ್ತಿದ್ದಂತೆ ಲಡ್ಡು ವಿತರಣೆ ಮಾಡಿ ಸಂಭ್ರಮವನ್ನು ಆಚರಿಸಿದ್ದರು.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version