ಸಿನಿಮಾ

ಸಂಗೀತ ಕ್ಷೇತ್ರಕ್ಕೂ ಕಾಲಿಟ್ಟ ಡೆಡ್ಲಿ ವೈರಸ್…!

Published

on

ಚೆನೈ: ಇಷ್ಟು ದಿನ ಜನಸಾಮಾನ್ಯರು ಸೇರಿದಂತೆ ಕೊರೊನಾ ವಾರಿಯಾರ್ಸ್ ಅನ್ನು ಬೆಂಬಿಡದೆ ಕಾಡ್ತಾಯಿದ್ದ ಕೊರೊನಾ ಈಗ ಸಂಗೀತ ಕ್ಷೇತ್ರಕ್ಕೂ ಕಾಲಿಟ್ಟಿದೆ. ಖ್ಯಾತ ಸಂಗೀತ ದಿಗ್ಗಜ್ಜ ಎಸ್,ಪಿ ಬಾಲಸುಬ್ರಮಣ್ಯಂ ಗೆ ಕೊರೊನಾ ಸೋಂಕು ದೃಡಪಟ್ಟಿದ್ದು, ಈ ಬಗ್ಗೆ ಸ್ವತಃ ವಿಡಿಯೋ ಮಾಡಿರುವ ಎಸ್ಪಿಬಿ, ಕಳೆದ ಎರಡ್ಮೂರು ದಿನಗಳಿಂದ ಶೀತ ಹಾಗು ಜ್ವರದಿಂದ ಬಳಲುತ್ತಿದ್ದೆ. ಇದನ್ನು ಕಡೆಗಣಿಸದೇ ಟೆಸ್ಟ್ ಮಾಡಿಸಿದಾಗ ಕಡಿಮೆ ಪ್ರಮಾಣದಲ್ಲಿ ಕೊರೊನಾ ಸೊಂಕು ಇರುವುದು ಧೃಡವಾಗಿದೆ.ಮನೆಯಲ್ಲೇ ಕ್ವಾರೆಂಟೈನ್ ಇರುವಂತೆ ವೈದ್ಯರು ಸೂಚನೆ ನೀಡಿದ್ರು. ಕುಟುಂಬಸ್ಥರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾವುದೇ ಆತಂಕ ಬೇಡ, ನಾನು ಸುರಕ್ಷತೆಯಿಂದ ಇದ್ದೇನೆ, ನಿಮ್ಮೇಲ್ಲರ ಪ್ರೀತಿ ವಿಶ್ವಾಸ ಸದಾ ನನ್ನ ಮೇಲಿರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಆದಷ್ಟೂ ಬೇಗ ಕೊರೊನಾದಿಂದ ಗುಣಮುಖನಾಗಿ ವಾಪಾಸ್ ಬರುತ್ತೇನೆ ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಮನವಿ ಮಾಡಿ ವಿಡೀಯೊವನ್ನು ಸೋಷಿಯಾಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version