ಶಿರಾ

ಶಿರಾದಲ್ಲಿ ಮತ್ತೇ ಶುರುವಾಯ್ತು ಆಕ್ರಮ ಮರಳು ದಂಧೆ…!

Published

on

ಶಿರಾ: ನಗರದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಇದಕ್ಕೆ ಅಂಕುಶ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಸಾರ್ವಜನಿಕರು ದೂರಿದ್ದಾರೆ. ಕಲ್ಲುಕೋಟೆ, ಒಜ್ಜುಗುಂಟೆ ಇನ್ನೀತರ ಭಾಗಗಳಲ್ಲಿ ಮರಳು ದಂಧೆ ನಡೆಯುತ್ತಿದ್ದು, ಅಕ್ರಮ ಮರಳು ಸಾಗಾಟ ರಾತ್ರಿ ಪೂರ್ತಿ ನಡೆಯುತ್ತಿದೆ. ಬೆಳಗಾಗುವಷ್ಟರಲ್ಲಿ ಎಲ್ಲವೂ ನಿಂತು ಹೋಗಿ ಏನೂ ಆಗಿಲ್ಲವೇಂಬತೆ ಪರಿಸ್ಥೀತಿ ನಿರ್ಮಾಣವಾಗಿರುತ್ತದೆ. ಇಲ್ಲಿ ನಡೆಯುತ್ತಿರುವ ಮರಳು ದಂಧೆಯ ಬಗ್ಗೆ ಅಧಿಕಾರಿಗಳೀಗೆ ಎಷ್ಟು ಸಲ ದೂರು ನೀಡಿದರು ಸಹ ಯಾರು ಕ್ಯಾರೇ ಅನ್ನದೇ ಇರುವುದು ಇಲ್ಲಿಯಾ ಗ್ರಾಮಸ್ಥರನ್ನು ಅನುಮಾನದ ಕೂಪಕ್ಕೆ ತಳ್ಳಿದಂತಾಗಿದೆ. ಅಧಿಕಾರಿಗಳು ಕೂಡ ಈ ದಂಧೇಯಲ್ಲಿ ಶಾಮಿಲ್ ಆಗಿರಬಹುದೆಂಬ ಶಂಖೆಯನ್ನು ಗ್ರಾಮಸ್ಥರು ಹೊರಹಾಕುತ್ತಿದ್ದಾರೆ. ಮರಳು ದಂಧೆಯಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಭೂಮಿಯನ್ನು ಆಳವಾಗಿ ಬಗೆದಿರುವುದರಿಂದ ಕೃಷಿ ಭೂಮಿ ಬರಡು ಭೂಮಿಯಾಗಿ ಮಾರ್ಪಾಡು ಹೊಂದುತ್ತಿದೆ. ಮರಳು ಫಿಲ್ಟರ್ಗೆ ಕೆರೆ ಕಟ್ಟೆಗಳ ನೀರು ಬಳಸುವುದು, ಕೆರೆಕಟ್ಟೆಗಳ ಅಂಗಳದಲ್ಲೇ ಮರಳು ದೋಚುವುದರಿಂದ ನೀರಿನ ಮೂಲಗಳು ಬರಿದಾಗುತ್ತಿವೆ. ಹೀಗಾದರೆ ಕುಡಿಯಲು ನೀರಿಗೆ ಎಲ್ಲಿ ಹೋಗುವುದು ಎಂಬ ಚಿಂತೆ ಜನರದ್ದಾಗಿದೆ. ಇನ್ಮುಂದೆಯಾದ್ರೂ ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಮರಳು ದಂಧೇ ನಡೆಸುವವರ ವಿರುದ್ದ ಕ್ರಮ ಕೈಗೊಂಡು ಹಳ್ಳೀಯ ವಾತಾವರಣ ಹಾಳಾಗದಂತೆ ನೊಡಿಕೊಳ್ಳಬೇಕು ಎಂಬುದು ಗ್ರಾಮಸ್ಥರ ಅಳಲಾಗಿದೆ.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Click to comment

Trending

Exit mobile version