ವಿಜಯಪುರ

ವರ್ಗಾವಣೆ ರದ್ದು ಪಡಿಸುವಂತೆ ಆಗ್ರಹ: ಜಯಕರ್ನಾಟಕ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ..!

Published

on

ವಿಜಯಪುರ: ಕೊವಿಡ್ -19 ಮಹಾಮರಿ ವೈರಸ್ ತಡೆಗಟ್ಟಲು ಫ್ರಂಟ್ ವಾರಿಯರ್ಸ್ ಆಗಿ ಹಗಲು ರಾತ್ರಿ ಅನ್ನದೇ ಜನರ ಸೇವೆ ಮಾಡಿದ ನಿಂಬಾಳ ಕೆಡಿ ಗ್ರಾಮ ಲೆಕ್ಕಾಧಿಕಾರಿ ವರ್ಗಾವಣೆ ರದ್ದು ಮಾಡಬೇಕು ಎಂದು ಜಯ ಕರ್ನಾಟಕದ ಸಂಘದ ಜಿಲ್ಲಾ ಮುಖಂಡ ಮಹೇಶ ನಾಯಕ ತಿಳಿಸಿದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಿರಸ್ತೆದಾರ ಜಿ.ಜಿ.ಗಲಗಲಿಯವರಿಗೆ ಮನವಿ ಸಲ್ಲಿಸಿ ಗ್ರಾಮ ಲೆಕ್ಕಾಧಿಕಾರಿಗಳ ವರ್ಗಾವಣೆ ಸಾರ್ವಜನಿಕ ಗಮನಕ್ಕೆ ಬಂದಿದೆ. ನಿಂಬಾಳ ಕೆಡಿ ಗ್ರಾಮ ಲೆಕ್ಕಾಧಿಕಾರಿ ತುಂಬಾನೆ ಸರಳತೆ ಮತ್ತು ವಿನಮ್ರತೆಯಿಂದ ಕೊವಿಡ್-19 ತಡೆಗಟ್ಟುವ ಕಾರ್ಯ ನಿರ್ವಹಿಸಿದ್ದಾರೆ.ಅನಕ್ಷರಸ್ಥರಿಗೆ,ವೃದ್ದರಿಗೆ,ಗ್ರಾಮೀಣ ಜನರಿಗೆ ತಮ್ಮ ಕರ್ತವ್ಯದಲ್ಲಿ ಬಹಳ ಸಹಕಾರ ನೀಡಿದ್ದಾರೆ. ಈ ವಿಷಯ ತಿಳಿದ ನಿಂಬಾಳ ಕೆಡಿ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಬಹಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ವರ್ಗಾವಣೆ ಕೈ ಬಿಡಬೇಕು ಎಂದು ಜಯ ಕರ್ನಾಟಕ ಸಂಘದ ವತಿಯಿಂದ ವಿನಂತಿಯ ಮನವಿ ಸಲ್ಲಿಸುತ್ತಿದ್ದೆವೆ. ಒಂದು ವೇಳೆ ವರ್ಗಾವಣೆ ಕೈ ಬಿಡದಿದ್ದರೆ ರಸ್ತೆಗೆ ಇಳಿದು ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು..

ವರದಿ: ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ವಿಜಯಪುರ

Click to comment

Trending

Exit mobile version