Uncategorized

ನಾಗಮಂಗಲದಲ್ಲಿ ದ್ವಿಶತಕದ ಗಡಿ ದಾಟಿದ ಕೊರೊನಾ ಕೇಸ್..!

Published

on

ನಾಗಮಂಗಲ: ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಮುಕ್ತ ತಾಲ್ಲೂಕೆಂಬಾ ಹೆಗ್ಗಳಿಕೆಗೆ ಪಾತ್ರವಾಗಿದ್ದಂತಹ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮತ್ತೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಕೇವಲ 35 ದಿನಗಲಿದಿಂಚೆಗೆ 237 ಪ್ರಕರಣಗಳು ಪತ್ತೆಯಾಗುವ ಮೂಲಕ ಕೊರೊನಾ ದ್ವಿಶತಕದ ಗಡಿ ದಾಟಿದೆ. ಇಲ್ಲಿಯವರೆಗೆ ಕೋವಿಡ್ ಪರೀಕ್ಷೆಗೊಳಗಾಗಿರುವ 4862 ವ್ಯಕ್ತಿಗಳ ಪೈಕಿ 221 ಮಂದಿಯ ವರದಿ ಬರಬೇಕಿದೆ. ಸೋಂಕು ಪತ್ತೆಯಾಗಿರುವ ಒಟ್ಟು 237 ರಲ್ಲಿ 87 ಜನ ಗುಣಮುಖರಾಗಿದ್ದು, 148 ಸಕ್ರಿಯ ಪ್ರಕರಣಗಳಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕಿನ ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ವಹಿಸಬೇಕಿರುವ 07 ಜನರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ತಹಸೀಲ್ದಾರ್ ಹಾಗೂ ತಾಲ್ಲೂಕು ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಕುಂಞ ಅಹಮ್ಮದ್, ಇಲ್ಲಿಯವರೆವಿಗೆ ಕಂಡು ಬಂದಿರುವ ಪ್ರಕರಣಗಳ ಪೈಕಿ, ಗ್ರಾಮೀಣ ಭಾಗಗಳಿಗಿಂತ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಪಕವಾಗಿರುವುದರಿಂದ ಹಳ್ಳಿಗಳ ರೈತಾಪಿ ಜನರು ಅನಾವಶ್ಯಕವಾಗಿ ನಾಗಮಂಗಲ ಪಟ್ಟಣಕ್ಕೆ ಬರಬಾರದು. ಸ್ಥಳೀಯವಾಗಿಯೇ ವ್ಯಾಪಾರ ವಹಿವಾಟು ಮಾಡಿಕೊಳ್ಳಬೇಕು. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿ ಅನುಸರಿಸುವ ಜೊತೆಗೆ ತಾತ್ಕಾಲಿಕವಾಗಿ ಹಬ್ಬ ಹರಿದಿನಗಳನ್ನು ನಿಷೇಧಿಸಬೇಕು ಕೊರೊನಾ ನಿಯಂತ್ರಣಕ್ಕಾಗಿ ಇಲ್ಲಿಯವರೆಗೆ ನೀಡಿದ ಸಹಕಾರದಂತೆ ಮುಂದೆಯೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version