ಮಂಡ್ಯ

ಜನರಿಗೆ ಶುದ್ಧವಾದ ಕಾವೇರಿ ನೀರನ್ನು ನೀಡುವ ಸಲುವಾಗಿ ನೀರಿನ ಘಟಕ ನಿರ್ಮಾಣ..!

Published

on

ಮಳವಳ್ಳಿ: ಪುರಸಭೆಯ 1918- 19 ನೇ ಸಾಲಿನ 14 ನೇ ಹಣಕಾಸು ಯೋಜನೆಯಡಿ ನಾಲ್ಕು ವಾರ್ಡ್ ಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಕಟ್ಟಡದ ಗುದ್ದಲಿ ಪೂಜೆಯನ್ನು ಶಾಸಕ ಡಾ.ಕೆ ಅನ್ನದಾನಿ ನೆರವೇರಿಸಿದರು. ಗುದ್ದಲಿ ಪೂಜೆ ಬಳಿಕ ಶಾಸಕ ಡಾ.ಕೆ ಅನ್ನದಾನಿ ಮಾತನಾಡಿ, ಶುದ್ಧ ಗಾಳಿ ಮತ್ತು ಶುದ್ಧ ಪರಿಸರ ಮನುಷ್ಯನಿಗೆ ಅತ್ಯವ್ಯಶಕ ಎಂದರು.ಪ್ರತಿಯೊಬ್ಬರಿಗೂ ಶುದ್ಧವಾದ ಕಾವೇರಿ ನೀರನ್ನು ನೀಡುವ ಸಲುವಾಗಿ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ, ಸಾರ್ವಜನಿಕರು ಇದನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕೊರೊನ ಸಾಂಕ್ರಾಮಿಕ ಖಾಯಿಲೆ ಯಾವ ಜಾತಿ, ಧರ್ಮ, ಮೇಲು ಕೀಳು, ಬಡವ ಶ್ರೀಮಂತ ಎನ್ನದೇ ಎಲ್ಲರನ್ನು ಭಾದಿಸಿದೆ, ಈಗಲಾದರೂ ನಾವು ಅರ್ಥ ಮಾಡಿಕೊಳ್ಳಬೇಕು, ಗಾಂಧೀಜಿ ಹೇಳಿದ ಹಾಗೆ ಸ್ವಚ್ಛತೆಯನ್ನು ಕಾಪಾಡಬೇಕು, ಇದರಿಂದ ಪರಿಸರ ಉಳಿಸಿದಂತೆ ಆಗುವುದು ಎಂದರು. ನಿಮ್ಮ ಅರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕು, ಅದಕ್ಕಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು, ನಿಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆದು ಕೊಳ್ಳಬೇಕು, ಕಡಿಮೆ ಬೆಲೆಗೆ ನೀರು ಸಿಗುತ್ತದೆ ಎಂದು ನೀರನ್ನು ಪೋಲುಮಾಡಬೇಡಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ, ಮಣಿ ನಾರಾಯಣ, ಪ್ರಮೀಳಾ, ನಾಗೇಶ್, ಮಾಜಿ ಅಧ್ಯಕ್ಷೆ ಸರೋಜಮ್ಮ, ಮಾಜಿ ಸದಸ್ಯ ಮಹಬೂಬ್ ಪಾಷಾ, ಮುಖ್ಯಾಧಿಕಾರಿ ಗಂಗಾಧರ್ ಸೇರಿದಂತೆ ಇತರರು ಇದ್ದರು.

ವರದಿ : ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version