ಹುಬ್ಬಳ್ಳಿ-ಧಾರವಾಡ

ಕುಖ್ಯಾತ ರೌಡಿ ಶೀಟರ್ ಇರ್ಫಾನ್ ಗುಂಡೇಟಿಗೆ ಬಲಿ…..

Published

on


ಗುಂಡೇಟಿನಿಂದ ತೀವ್ರ ಅಸ್ವಸ್ಥನಾಗಿದ್ದ ಕುಖ್ಯಾತ ರೌಡಿಶೀಟರ್ ಇರ್ಫಾನ್ ಖಾಸಗಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ನಿನ್ನೆ ಸಂಜೆ ಖಾಸಗಿ ಹೋಟೆಲ್ ಬಳಿ ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿಗಳು ಏಕಾಏಕಿ ರೌಡಿಶೀಟರ್ ಇರ್ಫಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹುಬ್ಬಳ್ಳಿ ಜನರು ಬೆಚ್ಚಿಬಿದ್ದಿದ್ದಾರೆ.ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇರ್ಫಾನ್ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇರ್ಫಾನ್ ಸಾವನ್ನಪ್ಪಿದ್ದಾನೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version