ರಾಯಚೂರು

ಸರ್ಕಾರಿ ಆಸ್ಪತ್ರೆಯಲ್ಲಿ ವೈಧ್ಯರ ಕೊರತೆ..ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ‌ ಸಿಗದೆ ಪರದಾಟ..!

Published

on

ಮಾನವಿ ತಾಲ್ಲೂಕಿನಲ್ಲಿರುವ ಸಾರ್ವಜನಿಕ ಅಸ್ಪತ್ರೆಯಲ್ಲಿ ೧೦೦ಹಾಸಿಗೆಗಳು ಇದ್ದರು ಇಲ್ಲಿ ವೈಧ್ಯರ ಕೊರತೆ ಎದ್ದು ಕಾಣುತ್ತಿದೆ.ವೈಧ್ಯರ ಕೊರತೆ ಹೆಚ್ಚು ಇರುವುದರಿಂದ ಈ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಜೊತೆಗೆ ಸ್ತ್ರೀ ರೋಗ ತಜ್ಞರು ಮಾತ್ರ ಒಬ್ಬರೇ ಇರುವುದರಿಂದ . ಗರ್ಭಿಣಿಯರಿಗೆ, ಬಾಣಂತಿಯರಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದಂತಾಗಿದೆ , ಇನ್ನು ಬಡವರ ಪಾಲಿನ ವರದಾನವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ತಜ್ಞ ವೈದ್ಯರಿಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಅಸ್ಪತ್ರೆಗೆ ಗರ್ಭಿಣಿ, ಬಾಣಂತಿಯರನ್ನು , ರವಾನಿಸುತ್ತಿರುವುದರಿಂದ ,ಸಾವು ನೋವಿನ ನಡುವೆ ಹೋರಾಟ ಮಾಡುವ ದುಷ್ಪರಿಣಾಮ ಎದುರಾಗುತ್ತಿದೆ.ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತದ್ದು ಬಡವರಪಾಲಿನ ಗಗನ ಕುಸುಮವಾಗಿದೆ..ಮೌಖಿಕ ಆದೇಶದ ಮೇರೆಗೆ ನಿಯೋಜನೆ ಮಾಡಿರುವ ಡಾ// ಉದಯ ಭಾಸ್ಕರ್ ರವರ ಆದೇಶವನ್ನು ಕೂಡಲೇ ರದ್ದು ಗೊಳಿಸಿ ಮಾನವಿ ಅಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುವoತೆ ಮರು ಆದೇಶ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು,,ಮಾನ್ಯ ತಹಶೀಲ್ದಾರ್ ಗೆ ಮಾನ್ಯ ಜಿಲ್ಲಾಧಿಕಾರಿಗಳು, ಹಾಗೂ ಮಾನ್ಯ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ.ಕ ರ .ವೇ ಜನಪರಬಣ ಸಂಘಟನೆಯಿo ದ ಮನವಿಯನ್ನು ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ ಕ.ರ.ವೇ.ಜನಪರಬಣ ರಾಜ್ಯಾಧ್ಯಕ್ಷರಾದ ಶ್ರೀ ಕಾಂತ್ ಪಾಟೀಲ್ ಗೂಳಿ, ರಾಮಣ್ಣ ನಾಯಕ , ನೂರುಲ್ಲಾ ಖಾನ್,ಅಮೃತ ಜೆಗರ್ ಕಲ್, ಕೃಷ್ಣ ದಾನಿ, ದೊಡ್ಡಪ್ಪ ಹೂಗರ್, ಇತರರು ಉಪಸ್ಥಿತರಿದ್ದರು.

ವರದಿ- ಸುಲ್ತಾನ್ ಬಾಬು ಎಕ್ಸ್ ಪ್ರೆಸ್ ಟಿವಿ

Click to comment

Trending

Exit mobile version