ಮಂಡ್ಯ

ರೈತರ ಬೆಳೆ ಸಮೀಕ್ಷೆ ಉತ್ಸವಕ್ಕೇ ಚಾಲಾನೆ…!

Published

on

ಮಳವಳ್ಳಿ:ತಾಲ್ಲೂಕು ಆಡಳಿತ ಹಾಗೂ ಕೃಷಿ ಇಲಾಖೆ ವತಿಯಿಂದ ರೈತರ ಬೆಳೆ ಸಮೀಕ್ಷೆ ಉತ್ಸವ 2020 ದ ಆಟೋ ಮೂಲಕ ಪ್ರಚಾರಕ್ಕೆ ಮಳವಳ್ಳಿ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಉಪತಹಸೀಲ್ದಾರ್ ಕುಮಾರ್ ಹಸಿರು ಭಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಉಪತಹಸೀಲ್ದಾರ್ ಕುಮಾರ್ ಮಾತನಾಡಿ,ರೈತರಿಗೆ ಬೆಳೆಗೆ ಪರಿಹಾರ ಸಿಗುತ್ತಿಲ್ಲ ಎಂದು ಹೇಳುತ್ತಿದ್ದರು , ಆದರೆ ಈಗ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದ್ದು, ರೈತರು ಬೆಳೆದ ಬೆಳೆಯನ್ನು ಅವರೇ ಪೋಟೋ ತೆಗೆದು ಮೊಬೈಲ್ ನಲ್ಲಿ ಅಫ್ ಬಳಸಿ ಫೋಟೋ ಕಳುಹಿಸಿದರೆ ಅದರ ಆಧಾರ ಮೇಲೆ ಸಮೀಕ್ಷೆ ಮಾಡಲಾಗುತ್ತದೆ. ಪ್ರತಿಯೊಬ್ಬ ರೈತರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ವಸಂತಕುಮಾರ್, ಕೃಷಿಇಲಾಖೆ ಸಹಾಯಕ ನಿರ್ದೇಶಕ ಮಹದೇವು, ರಾಜೇಶ್, ರೈತ ನಾಗಣ್ಣ, ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ: ಎ.ಎನ್ ಲೋಕೇಶ್
ಎಕ್ಸ್‌ ಪ್ರೆಸ್‌ ಟಿವಿ
ಮಳವಳ್ಳಿ

Click to comment

Trending

Exit mobile version