ಶಿರಾ

ಸರ್ಕಾರದಿಂದ ನೀಡಿರುವ ಸವಲತ್ತುಗಳನ್ನು ಪಡೆಯಲು ವಿಪಲರಾಗಿರುವವರಿಗೆ‌ ಪಿಂಚಣಿ ಅದಾಲತ್ ಯೋಜನೆ..!!!

Published

on

ಶಿರಾ:-ಸರ್ಕಾರದಿಂದ ಸಾಮಾಜಿಕ ಭದ್ರತಾ ಯೋಜನೆ ಅಡಿ ನೀಡಲಾಗುವ ಸವಲತ್ತುಗಳನ್ನು ಪಡೆದುಕೊಳ್ಳಲು ವಿಫಲವಾಗಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಲು ಪಿಂಚಣಿ ಅದಾಲತ್ ಸಹಕಾರಿಯಾಗಿದೆ’ ಎಂದು ತಹಶೀಲ್ದಾರ್ ನಾಹಿದಾ ಜಮ್ ಜಮ್ ಹೇಳಿದರು. ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಗೋಪಾಲ ದೇವರಹಳ್ಳಿ ವೃತ್ತದಲ್ಲಿ ಪಿಂಚಣಿ ಮತ್ತು ಕಂದಾಯ ಅದಾಲತ್, ಕಾರ್ಯಕ್ರಮವನ್ನು ಬೆಂಚೆ ಗೇಟ್ ನಲ್ಲಿಆಯೋಜಿಸಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಅಂಗವಿಕಲರಿಗೆ ವೇತನ, ವಿಧವಾ ವೇತನ, ವೃದ್ದಾಪ್ಯ ವೇತನ ಯೋಜನೆಗಳ ಸವಲತ್ತು ಪಡೆಯಲು ನಾಗರಿಕರು ನಿತ್ಯ ಕಚೇರಿಗೆ ಅಲೆಯುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಅದಾಲತ್ ಹಮ್ಮಿಕೊಳ್ಳಲಾಗಿದೆ.
ಇದರ ಸದುಪಯೋಗ ಪಡೆದು ಕೊಳ್ಳಲು ಮನವಿ ಮಾಡಿದರು. ಇನ್ನೂ ಕಾರ್ಯಕ್ರಮದಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಪೈಕಿ ಹಲವು ಅರ್ಜಿಗಳು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ರವರಾದ ಶ್ರೀಮತಿ ಅನ್ನಪೂರ್ಣಮ್ಮ, ರಾಜಸ್ವ ನಿರೀಕ್ಷಕರಾದ ಓ.ಶ್ರೀನಿವಾಸ್, ಗೋಪಾಲದೇವರಹಳ್ಳಿ ವೃತ್ತದ ಗ್ರಾಮಲೆಕ್ಕಿಗರಾದ ಗೋಪಾಲ್ ಭಜಂತ್ರಿ , ಹಾಗೂ ಗ್ರಾಮಲೆಕ್ಕಿಗರು ಹುಯಿಲ್ ದೊರೆ ವೃತ್ತದ ಸುದರ್ಶನ್, ವಡ್ಡನಾಡ. ವೃತ್ತದ ಸುನಿತಾ, ದೊಡ್ಡಾಗ್ರಹಾರ ವೃತ್ತದ ತನುಶ್ರೀ ಹಾಗೂ ನಾಡಕಛೇರಿ ಸಿಬ್ಬಂದಿಗಳು ಮತ್ತು ಗ್ರಾಮಸಹಾಯಕರುಗಳು ಹಾಗೂ ಪಿಂಚಣಿ ಫಲಾನುಭವಿಗಳು ಹಾಜರಿದ್ದರು.

Click to comment

Trending

Exit mobile version