ಸಿಂಧನೂರು

ಕಾರ್ಮಿಕ ವಿರೋಧಿ ಕಾನೂನು ತಿದ್ದುಪಡಿ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ…!

Published

on

ಸಿಂಧನೂರು: ಭೂ ಸುಧಾರಣೆ. ಎ.ಪಿ.ಎಮ್.ಸಿ. ಕಾರ್ಮಿಕ ವಿರೋಧಿ ಕಾನೂನನ್ನು ತಿದ್ದುಪಡಿ ಕೈಬಿಡಲು ಹಾಗೂ ಕೋವಿಡ್-೧೯ ಹೆಸರಿನಲ್ಲಿ ನಡೆದ ಭ್ರಷ್ಟಾಚಾರ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದಿಂದ ನಗರದ ಬಿ.ಎಸ್.ಎನ್. ಎಲ್. ಕಚೇರಿ ಮುಂಭಾಗದಿಂದ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ತಾಲೂಕು ಸಮಿತಿ ವತಿಯಿಂದ ತಹಶಿಲ್ದಾರ ಕಚೇರಿ ವರೆಗೆ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮೆರವಣಿಗೆ ಮಾಡಲಾಯಿತು. ಈ ಪ್ರತಿಭಟನೆ ಮೆರವಣಿಗೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ತಹಶಿಲ್ದಾರ ಕಚೇರಿ ಮುಂದೆ ಬಹಿರಂಗ ಸಮಾವೇಶ ನಡೆಸಲಾಯಿತು. ಈ ಸಮಾವೇಶದಲ್ಲಿಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನದ ಪ್ರಯುಕ್ತ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಮುಖಂಡ ಹೆಚ್.ಎನ್. ಬಡಿಗೇರ ಮಾತನಾಡಿ ಕೆಂದ್ರ ಸರ್ಕಾರವು ಸಂಸದೀಯ ವ್ಯವಸ್ಥೆಯನ್ನು ಧೂಳೀಪಟ‌ ಮಾಡಿ. ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ದೇಶದ ಜನರು ಹಿತವನ್ನು ಬಲಿಕೊಡುತ್ತಿದೆ ಎಂದರು. ಇಂದು
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮ ದಿನದಂದು ಜನಧ್ವನಿ ಪ್ರತಿಭಟನೆ ಕಾರ್ಯಕ್ರಮ ಮಾಡುವ ಮೂಲಕ ಅರ್ಥ ಪೂರ್ಣವಾಗಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಕಾನೂನನ್ನು ವಿರುದ್ಧ ಹೊರಟ ನಡೆಸಲಾಗುತ್ತಿದ್ದೆ ಕೂಡಲೇ ಈ ಜನ ವಿರೋಧಿ ಕಾನೂನನ್ನು ಕೈಬಿಡಲು ಆಗ್ರಹಿಸಿದರು..ಎಮ್. ದೊಡ್ಡ ಬಸವರಾಜ ಮಾತನಾಡಿ ಕೋವಿಡ್-೧೯ ನಿಯಂತ್ರಣ ಹೆಸರಿನಲ್ಲಿ ಸರ್ಕಾರವು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆ ಮಾಡಬೇಕು ಎಂದು ತಿಳಿಸಿದರು..ಇನ್ನೂ ಇದೇ ಸಂಧರ್ಭದಲ್ಲಿ ಮುಖಂಡರಾದ ಎಸ್. ಶರಣೇಗೌಡ.ನಗರ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಖಾಜಾಮಲ್ಲಿಕ್ ಮಾತನಾಡಿ ನಂತರ ಬರೆದ ಮನವಿ ಪತ್ರವನ್ನು ತಹಶಿಲ್ದಾರ ಮೂಲಕ ರಾಜ್ಯಪಾಲರಿಗೆ
ಸಲ್ಲಿಸಿದರು. ಈ ಸಂಧರ್ಭದಲ್ಲಿ ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಪಂಪನಗೌಡ ಬಾದರ್ಲಿ.ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಹಿರೇಗೌಡ.ನಗರ ಸಭೆ ಶೇಖರಪ್ಪ ಗಿಣಿವಾರ್.ಶರಣಪ್ಪ. ಜಾಫರ್ ಅಲಿ ಜಾಗಿರದಾರ್. ಅಮರೇಶ್ ಗುರಿಕಾರ್.ಸೇರಿದಂತೆ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.

Click to comment

Trending

Exit mobile version