ಲಿಂಗಸೂಗೂರು

ನಡು-ಗುಡ್ಡದಲ್ಲಿ ಸಿಲುಕಿರುವ ವ್ಯಕ್ತಿಗೆ ಡ್ರೋಣ್ ಮೂಲಕ ಔಷಧಿ ರವಾನೆ…!

Published

on

ಲಿಂಗಸಗೂರು: ಕೃಷ್ಣಾ ನದಿಯ ಪ್ರವಾಹದಿಂದ ನಡುಗುಡ್ಡದಲ್ಲಿ ಸಿಲುಕಿರುವ ವ್ಯಕ್ತಿಗೆ ಡ್ರೋಣ್ ಮೂಲಕ ಔಷಧಿ ಹಾಗೂ ಆಹಾರವನ್ನು ಯಶಸ್ವಿಯಾಗಿ ರವಾನೆ ಮಾಡಲಾಗಿದೆ ಎಂದು ಲಿಂಗಸೂಗೂರು ಸಹಾಯಕ ಆಯುಕ್ತರಾದ ರಾಜಶೇಖರ್ ಡಂಬಳ ರವರು
ಮಾಹಿತಿ ನೀಡಿದ್ದಾರೆ.
ತಾಲೂಕಿನ ಯಳಗುಂದಿ ಹತ್ತಿರದ ಕರಕಲಗಡ್ಡಿಯಲ್ಲಿ ಸಿಲುಕಿರುವ ನಾಲ್ಕು ಜನರ ಪೈಕಿ ತಿಪ್ಪಣ್ಣ ಎಂಬುವವರಿಗೆ ಅನಾರೋಗ್ಯ ಉಂಟಾಗಿರುವುದರಿಂದ ಮಾಹಿತಿ ಪಡೆದ ತಾಲೂಕಾಡಳಿತ ರಾಯಚೂರು ಹಾಗೂ ಕೃಷಿ ವಿ.ವಿ ಕುಲಪತಿಗಳಾದ ಕೆ,ಎನ್ ಕಟ್ಟಿಮನಿ ಇವರ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ವೀರನಗೌಡ ಡೀನ್ ಕೃಷಿ ತಾಂತ್ರಿಕ ಕಾಲೇಜು ರಾಯಚೂರು ಅಭಿಷೇಕ್, ರಾಯಚೂರು ಸಹಾಯಕ, ಪ್ರಾಧ್ಯಾಪಕ ಸುನೀಲ್ ರವರ ನೇತೃತ್ವದಲ್ಲಿ ನೆರೆಪೀಡಿತ ಜನರಿಗೆ ಔಷಧಿ ಹಾಗೂ ಆಹಾರದ ವಸ್ತುಗಳನ್ನು ಯಶಸ್ವಿ ಯಾಗಿ ಕಳುಹಿಸಲಾಗಿದ್ದು, ತಾಲ್ಲೂಕಾಡಳಿತದ ಈ ಕೆಲಸವು ಪ್ರಶಂಶನೀಯವಾಗಿದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.ಇನ್ನೂ
ಈ ಸಂದರ್ಭದಲ್ಲಿಆಯುಕ್ತರಾದ ರಾಜಶೇಖರ್ ಡಂಬಳ ತಹಸೀಲ್ದಾರ, ಚಾಮರಾಜ ಪಾಟೀಲ್, ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಸೇರಿದಂತೆ ಇತರರು ಉಪಸ್ಥೀತರಿದ್ದರು.

ವರದಿ- ವೀರೇಶ್ ಅರಮನಿ ಎಕ್ಸ್‌ಪ್ರೆಸ್‌ ಟಿವಿ ಲಿಂಗಸೂಗೂರು..

Click to comment

Trending

Exit mobile version