ಲಿಂಗಸೂಗೂರು

ಪಿ.ಡಿ.ಒ ಮತ್ತು ತಾ.ಪಂ.ಇ.ಒ.ರನ್ನು ಸೇವೆಯಿಂದ ವಜಾಗೊಳಿಸಲು ಸಹಾಯಕ ಅಯುಕ್ತರಿಗೆ ಮನವಿ..!

Published

on

ಲಿಂಗಸೂಗೂರು: ಗ್ರಾಮೀಣ ಭಾಗದ ಜನರು ತಮ್ಮ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಗ್ರಾ.ಪಂ.ಗೆ ಭೇಟಿ ನೀಡಿ, ಮೂಲಭೂತ ಸಮಸ್ಯೆಗಳನ್ನು ಆಲಿಸಿಸುವಂತೆ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ಸಾರ್ವಜನಿಕರ ದೂರುಗಳಿಗೆ ಮನ್ನಣೆ ನೀಡದೇ ಉದ್ದಟತನ ಪ್ರದರ್ಶಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ನಮಗೆ ಬೇಕಿಲ್ಲ ಅಮಾನತ್ತು ಮಾಡಿ ಎಂದು ಮನವಿ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾ.ಪಂ.ವ್ಯಾಪ್ತಿಗೆ ಆರೇಳು ಹಳ್ಳಿಗಳು ಬರುತ್ತವೆ. ಆದರೆ ಹಳ್ಳಿಗಳಲ್ಲಿ ರಸ್ತೆ, ಕುಡಿಯುವ ನೀರು, ವಸತಿ ಯೋಜನೆ, ಚರಂಡಿಯ ಅವ್ಯವಸ್ಥೆಯ ಬಗ್ಗೆ ಹಳ್ಳಿಗರು ಪಿಡಿಒ ಗೆ ಅನೇಕ ಬಾರಿ ದೂರು ನೀಡಿದರೆ ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಷ್ಟೇ ಅಲ್ಲದೇ
ಗ್ರಾಮಸ್ಥರು ಸಮಸ್ಯೆಗಳನ್ನು ಹೇಳಲು ಹೋದರೆ ಯಾರಿಗಾದರೂ ಹೇಳಿಕೊಳ್ಳಿ ಅಂತಿದ್ದಾರಂತೆ ನರಕಲದಿನ್ನಿ ಪಿಡಿಒ. ಕಮಲದಿನ್ನಿ ಗ್ರಾಮಸ್ಥರು ಗ್ರಾಮದ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಮನವಿಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ. ಬೇಜವಬ್ದಾರಿತನದಿಂದ ವರ್ತಿಸುತ್ತಿರುವ ಪಿಡಿಒ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕಮಲದಿನ್ನಿ ಗ್ರಾಮಸ್ಥರು ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ
ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಹಳ್ಳಿಗರ ಮನವಿಗೆ ಸ್ಪಂದಿಸಬೇಕಾಗಿದೆ.

ವರದಿ- ವೀರೇಶ್ ಅರಮನಿ ಎಕ್ಸ್‌ ಪ್ರೆಸ್‌ ಟಿವಿ ಲಿಂಗಸೂಗೂರು.

Click to comment

Trending

Exit mobile version