ಆನೆಕಲ್

ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ವಿಚಿತ್ರ ಫೈರಿಂಗ್..!

Published

on

ಆನೇಕಲ್ : ನಿನ್ನೆ ತಡರಾತ್ರಿ ಬೆಕ್ಕಿನ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಪೈರಿಂಗ್ ನೆಡೆಸಿ ಹತೈ ಮಾಡಿರುವ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.ಸರ್ಜಾಪುರ ಮತ್ತು ಬಾಗಲೂರ ರಸ್ತೆಯಲ್ಲಿರುವ ಸೈ ಲೈಟ್ ಲೇಔಟ್ ನ ನಿವಾಸಿ ಶೀಲಾ ಎಂಬುವರಿಗೆ ಸೇರಿದ ಬೆಕ್ಕಿಗೆ ಅಪರಿಚಿತ ವ್ಯಕ್ತಿಯೊರ್ವ ಬೆಳಗ್ಗಿನ ಜಾವ ಡಬ್ಬಲ್ ಬ್ಯಾರೆಲ್ ಗನ್ ನಿಂದ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.ಈ ಘಟನೆಯಿಂದ ವಿಲಾ ನಿವಾಸಿಗಳು ಭಯ ಭೀತರಾಗಿದ್ದು, ಆಕ್ರೋಶಗೊಂಡ ಮಹಿಳೆ ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಇನ್ನು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಕ್ಕನ್ನು ಯಾವ ವಿಷಯಕ್ಕೆ ಶೂಟೌಟ್ ಮಾಡಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ. ಭೇಟೆಗಾಗಿ ಬೆಕ್ಕನ್ನು ಶೂಟ್ ಮಾಡಿದ್ದಾರಾ ಅಥವಾ ಮೋಜಿಗಾಗಿ ಶೂಟ್ ಮಾಡಿದ್ದಾರಾ ಎಂಬುವುದು ತನಿಖೆಯಲ್ಲಿ ತಿಳಿದುಬರಬೇಕಾಗಿದೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ.

Click to comment

Trending

Exit mobile version