ಬೆಂಗಳೂರು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ.. ಜನರ ಜೇಬಿಗೆ ಬಿತ್ತು ಕತ್ತರಿ..!

Published

on

ಬೆಂಗಳೂರು:ಸರ್ಕಾರ ಪ್ರತಿಬಾರಿ ತಗೆದುಕೊಳ್ಳುವ ಕೆಲ ನಿರ್ಧಾರಗಳು ಜನರ ಪಾಲಿಗೆ ಸಂಕಷ್ಟವೇ ಸರಿ.ಪ್ರತಿಬಾರಿಯೂ ಒಂದಲ್ಲ ಒಂದು ಹೊಸ ನಿಯಮಾವಳಿಗಳನ್ನು ಸರ್ಕಾರ ಜಾರಿಗೆ ತರುತ್ತಲೇ ಇದೆ.ಸರ್ಕಾರದ ಕೆಲ ನಿರ್ಧಾರಗಳು ಜನರಿಗೆ ಒಳಿತಾದರೆ ಇನ್ನೂಳಿದ ಕೆಲ ನಿರ್ಧಾರಗಳು ಜನರಿಗೆ ಹೊಡೆತ ಬಿದ್ದಾಂತಾಗುತ್ತಿದೆ. ಸರ್ಕಾರ ಈ ಬಾರಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕ ಹೆಚ್ಚಳ ಮಾಡಬೇಕೆಂಬಾ ಚಿಂತನೆ ನಡೆಸಿದ್ದು,ಇದ್ದರಿಂದ ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ. ಕೆಲ ತಿಂಗಳ ಹಿಂದೆ ಸರ್ಕಾರ ಟೋಲ್ ಗಳಲ್ಲಿ ಸುಂಕವನ್ನು ಹೆಚ್ಚಿಸಲಾಗಿತ್ತು,ಆದ್ರೆ ಈಗಾ ಮತ್ತೇ ಸುಂಕ ಹೆಚ್ಚು ಮಾಡಲು ಮುಂದಾಗಿದೆ.ಇದ್ದರಿಂದ ಓಡಾಟ ನಡೆಸುತ್ತಿರುವ ವಾಹನಗಳ ಸವಾರರ ಜೇಬಿಗೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆ ಇದೆ.ಆದರೆ ಈ ಬಾರಿಯ ಸುಂಕ ಹೆಚ್ಚಳ ಪ್ರಸ್ತಾಪದ ಹಿಂದೆ ಮಹತ್ವದ ಸದುದ್ದೇಶವೂ ಇದೆ.ಮೋಟಾರು ವಾಹನ ಕಾಯ್ದೆಯನ್ನು ಕಳೆದ ವರ್ಷ ಉನ್ನತೀಕರಿಸಲಾಗಿತ್ತು. ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದ ಸಂದರ್ಭದಲ್ಲಿ,ರಸ್ತೆ ಅಪಘಾತಗಳಲ್ಲಿ ಬಲಿಯಾದವರು ಮತ್ತು ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಸವಲತ್ತು ಒದಗಿಸುವ ನಿಯಮವನ್ನೂ ಸೇರಿಸಲಾಗಿತ್ತು.ಆದರೆ ಈ ಸೌಲಭ್ಯ ಜಾರಿಗೆ ತರುವುದು ಸುಲಭವಾಗಿಲ್ಲ.ಯಾಕೆಂದರೆ ದೇಶದಲ್ಲಿ ದಿನನಿತ್ಯ ಲೆಕ್ಕವಿಲ್ಲದಷ್ಟು ರಸ್ತೆ ಅಪಘಾತ ಪ್ರಕರಣಗಳು ವರದಿಯಾಗುತ್ತಿದ್ದು, ಎಲ್ಲರ ಚಿಕಿತ್ಸೆಗೆ ಭಾರಿ ಪ್ರಮಾಣದ ಹಣದ ಅಗತ್ಯ ಬೀಳುತ್ತದೆ.ಈ ಬಾರಿಯಾ ಸುಂಕ ಹೆಚ್ಚಳದಿಂದ ಅಪಘಾತದ ಬಲಿಪಶುಗಳ ಚಿಕಿತ್ಸೆಗೆ ಬೇಕಾದ ಅಗತ್ಯ ನಿಧಿಯನ್ನು ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸುಂಕದ ದರವನ್ನು ಹೆಚ್ಚಳ ಮಾಡುವ ಕ್ರಮವನ್ನು ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.ಒಟ್ಟಾರೆ ಕೆಲವೊಂದು ಬಾರಿ ಸರ್ಕಾರ ಏನೇ ನಿರ್ಧಾರಗಳನ್ನು ತೆಗೆದುಕೊಂಡರು ಅದು ಜನರ ಪಾಲಿಗೆ ಹೊರೆಯಾಗುವುದರ ಜೊತೆಗೆ ಜನರ ಹಿತಾರಕ್ಷಣೆಯನ್ನು ಕಾಪಾಡುವುದಕ್ಕೂ ಸಹಾಯವಾಗುತ್ತದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version