ಶಿರಾ

ರೈತರ ಜಮೀನಿಗೆ ಪರಿಹಾರ ನೀಡದೆ ಕಾಮಗಾರಿ ಪ್ರಾರಂಭ..ರೈತರು ಕಂಗಾಲು..!

Published

on

ಶಿರಾ:- ಶಿರಾ ತಾಲ್ಲೂಕಿನ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿ ರೈತರ ಜಮೀನುಗಳಲ್ಲಿ ಅಪಾರ ಪ್ರಮಾಣದ ವಿವಿಧ ಬೆಳೆಗಳನ್ನು ನಾಶ ಮಾಡಿ ರೈತರುಗಳಿಗೆಗಳಿಗೆ ಪರಿಹಾರ ನೀಡದೇ ವಂಚನೆ ಮಾಡಿ ಕಾಮಗಾರಿ ಮಾಡುತ್ತಿದ್ದು, ರೈತರಿಗೆಸೂಕ್ತ ಪರಿಹಾರ ನೀಡುವಂತೆ ರೈತ ಸಂಘಟನೆ ಆಗ್ರಹಿಸಿದೆ. ಮಂಗಳೂರಿನಿಂದಾ ಆಂಧ್ರಪ್ರದೇಶದ ಚರ್ಲೆಪಲ್ಲಿ ಗ್ರಾಮಕ್ಕೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು ಎಲ್.ಪಿ.ಜಿ, ಅನಿಲ ಸಾಗಾಣಿಕೆಗಾಗಿ ಭೂಮಿಯ ಅಡಿಯಲ್ಲಿ ಅನಿಲ ಕೊಳವೆ ಮಾರ್ಗಗಳನ್ನು ಆಳವಡಿಸಲು ತಾಲ್ಲೂಕಿನ ಗೌಡಗೆರೆ ಹೋಬಳಿಯ ಹುಣಸೆ ಹಳ್ಳಿ, ದಂಡಿನಕೆರೆ, ಚಂಗಾವರದವರೆಗೆ ಮತ್ತು ಹುಲಿಕುಂಟೆ ಹೋಬಳಿಯ ನೈಜಂತಿ, ಕರಿದಾಸರಹಳ್ಳಿ ಸೇರಿದಂತೆ ಮತ್ತಿತರ ವ್ಯಾಪಿಯ ಚಿರತೆಹಳ್ಳಿವರೆಗೆ ಯೋಜನೆಯ ಕಾಮಗಾರಿ ಮಾಡಲು ಆರಂಭ ಮಾಡಲಾಗಿದೆ.ರೈತರ ಜಮೀನಿನಲ್ಲಿರುವ ಅಪಾರ ಪ್ರಮಾಣದ ಬೆಳೆಗಳನ್ನು ಕಾಮಗಾರಿ ವೇಳೆ ಜಿ.ಸಿ.ಬಿ. ಯಂತ್ರಗಳ ಮೂಲಕ ಭೂಮಿ ಅಗಿದು ಬೆಳೆ ನಾಶ ಮಾಡುತ್ತಿದ್ದು ಇದರಿಂದ ರೈತರಿಗೆ ಯಾವುದೇ ಪರಿಹಾರವನ್ನು ನೀಡದೇ ಕಂಪನಿಯ ಕಾಗದ ಪತ್ರಗಳಿಗೆ ರೈತರಿಂದ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಮೇಲ್ಕಂಡ ಯೋಜನೆಯ ಕಾಮಗಾರಿಯನ್ನು ನಡೆಸುವ ಮೊದಲು ರೈತರ ಸಭೆಗಳನ್ನಾಗಲೀ,ಅಧಿಕಾರಿಗಳ ಮಾಹಿತಿಯಾಗಲೀ ಕಾಮಗಾರಿ ನಡೆಸುತ್ತಿರುವ ಕಂಪನಿಯ ಅಧಿಕಾರಿಗಳಿಂದ ರೈತರಿಗೆ ಮಾಹಿತಿ ತಲುಪಿಲ್ಲ. ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಯುವುದಕ್ಕಿಂತ ಮೊದಲು ರೈತರ ಒಪ್ಪಿಗೆ ಪಡೆಯದೇ ಯಾವುದೇ ಕಾಮಗಾರಿಗಳನ್ನು ಮಾಡಕೂಡದು ಎಂದು ಭೂಸ್ವಾಧೀನ ಕಾಯ್ದೆಯಲ್ಲಿ ಇದ್ದರೂ ಕೂಡ ಈ ಕಾಯ್ದೆಯ ಕಾನೂನು ಉಲ್ಲಂಘನೆ ಮಾಡಿ ಮೇಲ್ಕಂಡ ಕಂಪನಿಯವರು ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ಮೇಲ್ಕಂಡ ಕಾಮಗಾರಿಗೆ ಸಂಬಂಧಿಸಿದಂತೆ ಭೂ ಮಾಲೀಕರು ರೈತರಿಗೆ ಮಾಹಿತಿ ನೀಡದೆ ಕಾಮಗಾರಿ ನಡೆಸುವುದು ತಪ್ಪು. ಜೊತೆಗೆ ತೀವ್ರ ಬರದಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದರಿಂದ ರೈತರಿಗೆ ಸೂಕ್ತ ಪರಿಹಾರ ನೀಡಿದರೆ ಮಾತ್ರ ಪೆಟ್ರೋಲ್ ಪೈಪ್‌ಲೈನ್ ಕಾಮಗಾರಿ ನಡೆಸಲು ಅವಕಾಶ ನೀಡಲಾಗುವುದು ಎಂದು ರೈತ ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ನೇತೃತ್ವದಲ್ಲಿ ಇಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Click to comment

Trending

Exit mobile version