ಮಂಡ್ಯ

ವಿಶ್ವ ಕರ್ಮ ಜನಾಂಗದ ಸಮಸ್ಯೆ ಆಲಿಸಲು ಕೆ.ಪಿ. ನಂಜುಂಡಿ ಆಗಮನ..!

Published

on

ಮಳವಳ್ಳಿ : ಆಗಸ್ಟ್ 26 ರಂದು ಮಳವಳ್ಳಿಗೆ ವಿಶ್ವ ಕರ್ಮ ಜನಾಂಗದ ಕುಂದು ಕೊರತೆಯನ್ನು ಆಲಿಸಲು ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ರಾಜ್ಯಾಧ್ಯಕ್ಷರಾದ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಪಿ. ನಂಜುಂಡಿ ಆಗಮಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸೋಮಶೇಖರ್ ತಿಳಿಸಿದರು. ಮಳವಳ್ಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ತಾಲ್ಲೂಕಿನಲ್ಲಿ ಸಮುದಾಯದ ಜನರಿಗೆ ಸಿಗುವ ಸವಲತ್ತುಗಳನ್ನು ನೇರವಾಗಿ ನೀಡುವ ಉದ್ದೇಶದಿಂದ ಆಗಮಿಸುತ್ತಿದ್ದು ಅಂದು ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಇವರೊಟ್ಟಿಗೆ ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ಯುವ ಘಟಕದ ರಾಜ್ಯಧ್ಯಕ್ಷ ಶ್ರೀನಿವಾಸ್, ರಾಜ್ಯ ಬಿಜೆಪಿ ವಿಶ್ವ ಕರ್ಮ ಸಮುದಾಯದ ಮುಖಂಡರಾದ ಲೋಹಿತ್ ಕಲ್ವಿರ್ ಹಾಗೂ ಇತರರು ಆಗಮಿಸುತ್ತಿದ್ದಾರೆ. ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಹೇಶ್ ಮಾತನಾಡಿ ಆಗಸ್ಟ್ 26 ಹಲಗೂರಿಗೆ ಆಗಮನ, ವಿಶ್ವ ಕರ್ಮ ದೇವಸ್ಥಾನದಲ್ಲಿ ಹೋಬಳಿ ಸಭೆಯಲ್ಲಿ ಪಾಲ್ಗೊಂಡು,ಬಳಿಕ ನಡಕಲಾಪುರ ಬಸವೇಶ್ವರ ದೇವಸ್ಥಾನ ಸಭೆ, ನಂತರ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮುದಾಯದ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು. ಕುಂದೂರು ಬೆಟ್ಟದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಬೆಳಕವಾಡಿಯಲ್ಲಿ ಬಿ. ಜಿ. ಪುರ ಹೋಬಳಿ ಸಭೆ ನಡೆಸಿ ಕಿರುಗಾವಲಿನಲ್ಲಿ ಹೋಬಳಿ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಸಮಾಜದ ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಭಾಮಾ.ಎನ್, ಕಿರುಗಾವಲು ಹೋಬಳಿ ಮಹಿಳಾ ಅಧ್ಯಕ್ಷೆ ಸಾವಿತ್ರಮ್ಮ, ಮುಖಂಡರಾದ ಎಂ ನಿಂಗಾಚಾರ್, ಬಸವಣ್ಣ, ಸ್ವಾಮಿ,ಕುಮಾರ್, ಸಂಜಯ್ ಇತರರು ಉಪಸ್ಥಿತರಿದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version