ಬೆಂಗಳೂರು

ಮೆಟ್ರೋ ಸಂಚಾರಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್..ಸೆಪ್ಟೆಂಬರ್ ನಿಂದ ಶುರುವಾಗಲಿದೆಯಾ ಮೆಟ್ರೋ ಸಂಚಾರ..!

Published

on

ಬೆಂಗಳೂರು: ನಗರದಲ್ಲಿ ಕೊರೊನಾದಿಂದಾಗಿ ಬಸ್ ಸಂಚಾರ, ರೈಲು ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ಒಂದೊಂದಾಗಿ ಮೊದಲಿನಂತೆಯೇ ತನ್ನ ಕೆಲಸ ಪ್ರಾರಂಭಿಸಲು ಮುಂದಾಗಿದ್ದಾವೆ. ಬಸ್-ರೈಲು ಅಷ್ಟೇ ಅಲ್ಲದೇ ಕೋವಿಡ್ ಹರಡುವಿಕೆಯ ಭೀತಿಯಿಂದ ಎಲ್ಲೇಡೆ ಮೆಟ್ರೋ ಸಂಚಾರವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬಂದ್ ಮಾಡಿತ್ತು..ಆದ್ರೆ ಈಗಾ ಅನ್ ಲಾಕ್ ಮಾರ್ಗಸೂಚಿಯಂತೆ ಸೆಪ್ಟೆಂಬರ್ ತಿಂಗಳಿಂದ ಮೆಟ್ರೊ ಸಂಚಾರ ಪುನಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಸರ್ಕಾರ ಮನವಿಯನ್ನು ಸಲ್ಲಿಸಿದೆ. ಸೆಪ್ಟೆಂಬರ್ 1 ರಿಂದ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು, ಆಗ ಮೆಟ್ರೋ ರೈಲಿನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ವಿವಿಧ ರಾಜ್ಯಗಳ ಜೊತೆ ಚರ್ಚಿಸಿದ ಬಳಿಕ ಈ ಕುರಿತು ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆಯಂತೆ. ಯಾವುದೇ ರಾಜ್ಯದಲ್ಲಿಯೂ ಇನ್ನೂ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಮೆಟ್ರೋ ರೈಲಿನ ಸಂಚಾರ ಕಡಿಮೆ ಅವಧಿಯದ್ದೂ ಆಗಿರುತ್ತದೆ. ಹೆಚ್ಚು ಜನರು ಸೇರದಂತೆ ಎಚ್ಚರಿಕೆ ಕೈಗೊಂಡು ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ವಿವಿಧ ರಾಜ್ಯಗಳ ಬೇಡಿಕೆಯಾಗಿದೆ. ಸಂಚಾರಕ್ಕೆ ಅವಕಾಶ ನೀಡಿದರೆ ಬೆಂಗಳೂರಿನಲ್ಲಿಯೂ ನಮ್ಮ ಮೆಟ್ರೋ ಸಂಚಾರ ಆರಂಭವಾಗಲಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version