ರಾಜಕೀಯ

ಕೆಂಚಮ್ಮನ ಕೆರೆಗೆ ಯು.ಬಿ.ಬಣಕಾರ್ ಜೊತೆ ಬಾಗೀನ ಅರ್ಪಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್..!

Published

on

ಹಾವೇರಿ: ಇದೇ ಮೊದಲ ಬಾರಿ ತಾವು ಹಾಗೂ ಯು.ಬಿ.ಬಣಕಾರ್ ಇಬ್ಬರೂ ಸೇರಿ ಬಾಗಿನ ಅರ್ಪಿಸಿರುವುದು ವಿಶೇಷ ಹಾಗೂ ಪುಣ್ಯದ ಕೆಲಸ.ಕೆರೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಇಬ್ಬರೂ ಶ್ರಮಿಸುವುದಾಗಿ ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಐತಿಹಾಸಿಕ ಪ್ರಸಿದ್ಧ ರಟ್ಟಿಹಳ್ಳಿ -ಹಿರೇಕೆರೂರಿನ “ಮದಗಮಾಸೂರು ಕೆರೆ” ( ಕೆಂಚಮ್ಮನ ಕೆರೆ)ಗೆ ಬಾಗೀನ ಅರ್ಪಿಸಿ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. 2018-19 ಸಾಲಿನಲ್ಲಿ ಎಡಬಲದಂಡೆಗೆ 25 ಕೋಟಿ ರೂ.ಅಭಿವೃದ್ಧಿಗೆ ಇಡಲಾಗಿತ್ತು, ಆದರೆ ಕೋವಿಡ್ ಕಾರಣದಿಂದ ಹಣದ ಕೊರತೆಯಾಗಿದೆ. ಎಡಬಲ ದಂಡೆಗಳನ್ನು ನವೀಕರಿಸಿ ಕೆರೆಯನ್ನು ಅಭಿವೃದ್ಧಿ ಮಾಡಿ ಕ್ಷೇತ್ರದ ರೈತರು ಹಾಗೂ ಜನತೆಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಪ್ರತಿವರ್ಷ ತಾವು ಹಾಗೂ ಯು.ಬಿ.ಬಣಕಾರ್ ಪ್ರತ್ಯೇಕವಾಗಿ ಬಾಗೀನ ಬಿಡುತ್ತಿದ್ದೆವು. ದೇವರ ದಯೆಯಿಂದ ಈ ಬಾರಿ ಕೃಷಿ ಸಚಿವನಾಗುವ ಸೌಭಾಗ್ಯ ದೊರೆತಿದ್ದು, ಇಬ್ಬರೂ ಸೇರಿ ಕೆಂಚಮ್ಮನ ಕೆರೆಗೆ ಬಾಗೀನ ಅರ್ಪಿಸಿದ್ದೇವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು..

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version