ರಾಯಚೂರು

ಸ್ಪರ್ಶರನ್ನು ದಲಿತ ಪಟ್ಟಿಯಿoದ ಕೈ ಬಿಡುವಂತೆ ಅಸ್ಪರ್ಶ ಸಮುದಾಯದಗಳಿಂದ ಪತ್ರ ಚಳುವಳಿ..!

Published

on

ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದಲ್ಲಿ ಸ್ಪರ್ಶರನ್ನು ದಲಿತ ಪಟ್ಟಿಯಿಂದ ಹೊರಹಾಕಲು ಅಸ್ಪಶ್ಯ ಸಮುದಾಯಗಳು ಬೃಹತ್ ಪತ್ರ ಚಳುವಳಿಯನ್ನು ನಡೆಸಿದರು. ಕರ್ನಾಟಕದ ಮೂಲ ಅಸ್ಪೃಶ್ಯ ಸಮುದಾಯಗಳಾದ ಮಾದಿಗ ಹಾಗೂ ಛಲವಾದಿ ಸಂಬಂಧಿತ ಉಪಜಾತಿಗಳಾದ ಮೊಚೆ, ಸಮಗಾರ, ಡೋಹಾರ ಹಾಗೂ ದಕ್ಕಲಿಗ ಸೇರಿದಂತೆ ಹರಳಯ್ಯ, ಮಾಲದಾಸ, ಮಾದಿಗದಾಸ, ಚನ್ನದಾಸರ ಎಂಬ 89 ಜಾತಿಗಳ ಸಂವಿಧಾನ ಬದ್ಧ ಹಾಗೂ ಶಾಸನ ಬದ್ದ ಮೀಸಲಾತಿಯನ್ನು ಕಬಳಿಸುತ್ತಿರುವ ಬಲಾತ್ಮಕರಾದ ಲಂಬಾಣಿ, ಭೋವಿ ವಡ್ಡ ಹಾಗೂ ಕೊರಮ,ಕೊರವ ಇವರನ್ನು ದಲಿತರ ಪಟ್ಟಿಯ ಮೀಸಲಾತಿಯಿಂದ ತೆಗೆದು ಹಾಕಬೇಕು ಎಂದು ಪತ್ರ ಚಳವಳಿ ಮಾಡಿದರು. ಕರ್ನಾಟಕ ರಾಜ್ಯ ಅಸ್ಪೃಶ್ಯ ಸಮಾಜದ ತಾಲ್ಲೂಕ್ ಸಂಯೋಜನ ವತಿಯಿಂದ. ಮೌನೇಶ್ ಕೊಂರಿ ಮಾತನಾಡಿ ಜಾತಿ ರಾಜಕಾರಣದ ಜಾಲ ಹೆಚ್ಚಿದೆ-ಮೀಸಲಾತಿ ಮೂಲೆ ಗುಂಪಾಗಿದೆ ವಿದ್ಯೆ-ಉದ್ಯೋಗ ಇಲ್ಲವಾಗಿದೆ, ಕಿತ್ತು ತಿನ್ನುವ ಬಡತನ, ಜೀವಂತವಾಗಿ ಸುಡುತ್ತಿರುವ ಜಾತಿ ಪದ್ಧತಿಗಳ ಮಧ್ಯೆ ಸಿಲುಕಿದ ಸಮುದಾಯಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲಿ ಎಂದು ತಿಳಿಸಿದ್ದು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಚಳುವಳಿಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗಂಗಾಧರ ಹಿಂದಿನಮನೆ, ನಾಗರಾಜ್ ಹರಿಜನ, ಮೌನೇಶ ಕೋರಿ, ಶಂಕರ್ , ಹರಿಜನ ಚನ್ನಬಸವ ಚಲುವಾದಿ,ಅಮರೇಶ ಗ್ರಾಕೂಸ, ಜಗದೀಶ್ ಸಾಲಮನಿ, R.ಚನ್ನಬಸವ ಬಾಗಲವಾಡ ಮತ್ತೀತರು ಉಪಸ್ಥಿತರಿದ್ದರು.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Click to comment

Trending

Exit mobile version