ತಿಪಟೂರು

ಯುವಕನ ಮೇಲೆ ಡಿವೈಎಸ್ಪಿ ಯಿಂದ ಹಲ್ಲೆ…!

Published

on

ತಿಪಟೂರು: ಆಲದಹಳ್ಳಿ ಹರೀಶ್ ಎಂಬುವರ ಮೇಲೆ ಡಿವೈಎಸ್ಪಿ ಚಂದನ್ ಕುಮಾರ್ ಕಚೇರಿಯಲ್ಲೇ ಹಲ್ಲೆ ಮಾಡಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ.ಸೋಮವಾರ ಮಧ್ಯಾಹ್ನ ಡಿವೈಎಸ್ಪಿ ಕಚೇರಿಯಿಂದ ಕಾಲ್ ಬಂದಿದ್ದು ಒಂದು ಪ್ರಕರಣದ ಬಗ್ಗೆ ಮಾತಾನಾಡುವುದು ಇದೆ ಕಛೇರಿಗೆ ಬನ್ನಿ ಎಂದು ಹರೀಶ್ ಎಂಬಾತನನ್ನು ಕರೆಸಲಾಗಿದೆ. ನಂತರ ಡಿವೈಎಸ್ಪಿ ಚಂದನ್ ಕುಮಾರ್ ಹರೀಶ್ ಎಂಬಾತನಿಗೆ ನೀನು ಜನಪ್ರತಿನಿಧಿಗಳ ವಿರುದ್ದ ಮಾತನಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿಯಿಂದ ಕೈಕಾಲುಗಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದು ಆತನ ಮೇಲೆ ದೌರ್ಜನ್ಯ ಎಸಗಿದ್ದಾರೆ.ಹಲ್ಲೆಗೆ ಒಳಗಾದ ಹರೀಶ್ ನನ್ನು ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಡಿವೈಎಸ್ಪಿಯ ಈ ದರ್ಪಕ್ಕೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಯಾವ ಕಾರಣಕ್ಕೆ ಪೋಲಿಸರು ಈ ರೀತಿ ಮಾಡಿದ್ದಾರೆ ಕಾರಣವೇನು ಕೂಡಲೇ ಸರ್ಕಾರ ಡಿವೈಎಸ್ಪಿ ಚಂದನ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ತಿಪಟೂರು ನಗರದಲ್ಲಿ ದೊಡ್ಡ ಮಟ್ಟಿಗೆ ಪ್ರತಿಭಟನೆ ನಡೆಸಲಾಗುವುದು,ಹಾಗೂ ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗೂ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ಹಲ್ಲೆಗೊಳಗಾದ ಹರೀಶ್ ರವರ ಸಂಬಂಧಿಗಳು ತಿಳಿಸಿದ್ದಾರೆ.

ವರದಿ- ಸಿದ್ದೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version