ಹುಬ್ಬಳ್ಳಿ-ಧಾರವಾಡ

ಕಾರ್ಮಿಕ ಕಾರ್ಡ್ ಇದ್ದವರಿಗೆ ಮಾತ್ರ ಚಿಕಿತ್ಸೆ ಸರಿಯಲ್ಲ…ಕಾರ್ಡ್ ರಹಿತರಿಗೂ ಔಷಧ ನೀಡಿ: ಹೆಬ್ಬಾರ್

Published

on

ಹುಬ್ಬಳ್ಳಿ- ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯು ಕೇವಲ ಕಾರ್ಮಿಕ ಕಾರ್ಡ್ ಇದ್ದವರಿಗೆ ಮಾತ್ರ ಚಿಕಿತ್ಸೆ ಎಂಬುವಂತಹ ಮನಸ್ಥಿತಿಯನ್ನು ಕೈ ಬಿಡಬೇಕು. ಕಾರ್ಮಿಕ ಕಾರ್ಡ್ ರಹಿತ ಸಾರ್ವಜನಿಕರಿಗೂ ಕೂಡ ಔಷಧ ನೀಡಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಿದರು.ಇಎಸ್ಐ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವ್ಯವಸ್ಥೆ ಕುರಿತು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಮಾತ್ರ ಚಿಕಿತ್ಸೆ ನೀಡುತ್ತೇವೆ ಎಂಬುವಂತಹ ಬೋರ್ಡ್ ಹಾಕಿಕೊಂಡಿಲ್ಲ. ಕಾರ್ಡ್ ಇಲ್ಲದವರಿಗೂ ಕೂಡ ಚಿಕಿತ್ಸೆ ನೀಡಬೇಕು ಎಂದು ಖಡಕ್ ಸೂಚನೆ ನೀಡಿದರು. ವರ್ಷಕ್ಕೆ ಐದು ನೂರು ಕೋಟಿ ಔಷಧಕ್ಕೆ ಸರ್ಕಾರ ಖರ್ಚು ಮಾಡುತ್ತಿದೆ.ಆದರೆ 1.4 ಔಷಧ ಕೂಡ ಖರ್ಚು ಆಗುತ್ತಿಲ್ಲ.ಆದ್ದರಿಂದ ಇಂತಹ ಮನಸ್ಥಿತಿಯನ್ನು ಕೂಡಲೇ ಕೈ ಬಿಡಬೇಕು ಎಲ್ಲರಿಗೂ ಅವಶ್ಯಕತೆಗೆ ಅನುಗುಣವಾಗಿ ಔಷಧ ಒದಗಿಸುವ ಕಾರ್ಯಮಾಡಬೇಕು ಎಂದ ಖಡಕ್ ಆಗಿ ತಿಳಿಸಿದರು..

ವರದಿ-ರಾಜು ಮುದಕಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version