ಮಂಡ್ಯ

ವಿದ್ಯಾಸಂಸ್ಥೆಗೆ ಅನುಮೋದನೆ ನೀಡಿರುವ ಜಾಗವನ್ನು ರದ್ದು ಮಾಡುವಂತೆ ಆಗ್ರಹ..!

Published

on

ಮಳವಳ್ಳಿ:ಹಿಟ್ಟನಹಳ್ಳಿ ಗ್ರಾಮದ ಆಶ್ರಯ ಯೋಜನೆ ಯಡಿರುವ ಜಾಗವನ್ನು ಖಾಸಗಿ ವಿದ್ಯಾಸಂಸ್ಥೆಗೆ ಅನುಮೋದನೆ ನೀಡಿರುವುದನ್ನು ರದ್ದು ಮಾಡುವಂತೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದವರು ಗದ್ದಲ ಗೊಂದಲ ಸೃಷ್ಟಿಸಿದ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು.ಆಗಸ್ಟ್ 18ರಂದು ಕೋರಮ್ ಇಲ್ಲದೆ ಸಭೆ ರದ್ದಾದ ಹಿನ್ನಲೆಯಲ್ಲಿ ಇಂದು ತಾ.ಪಂ ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಗುತ್ತಿದ್ದಂತೆ ಶಿಲ್ಪಮಹೇಶ್ ರವರು ಪೊಲೀಸರನ್ನು ಏಕೆ ಕರೆಸಿದ್ದೀರಿ, ತಾ.ಪಂ ಇತಿಹಾಸದಲ್ಲಿ ಇದುವರೆಗೂ ಪೊಲೀಸರನ್ನು ಕರೆಸಲಿಲ್ಲ ಈಗಯಾವ ಗಲಾಟೆ ನಡೆಯುತ್ತಿತ್ತು ಎಂದು ಪ್ರಶ್ನಿಸಿದರು.ಇವರಿಗೆ ದ್ವನಿಗೂಡಿಸಿದ ವಿರೋಧ ಪಕ್ಷ ನಾಯಕ ನಟೇಶ ಹಾಗೂ 11 ಮಂದಿ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಮಾತಿನ ಚಕಮುಕಿ ನಡೆಯಿತು.ಸದಸ್ಯ ಪುಟ್ಟಸ್ವಾಮಿ ಹಿಟ್ಟನಹಳ್ಳಿ ಗ್ರಾಮದ 21 ಕುಂಟೆ ಜಾಗವನ್ನು ಖಾಸಗಿ ವಿದ್ಯಾ ಸಂಸ್ಥೆಗೆ ಮಂಜೂರು ಮಾಡಿರುವ ಆದೇಶವನ್ನು ರದ್ದು ಮಾಡಬೇಕು ಅಲ್ಲಿಯವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಈ ನಡುವೆ ವಿರೋದ ಪಕ್ಷದ ಸದಸ್ಯರುಗಳು ದಿಕ್ಕಾರಗಳನ್ನು ಕೂಗಿದರು.ಸಭೆ ಬಹಿಷ್ಕಾರದ ನಡುವೆಯೂ ಮಳವಳ್ಳಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುಂದರೇಶ್ ರವರು 1.50 ಲಕ್ಷಗಳ ಯೋಜನೆಗೆ ಅನುಮೋದನೆಯನ್ನು ನೀಡಲಾಯಿತು.2019 – 20 ನೇ ಸಾಲಿನ ಅನಿರ್ಬಂಧಿತ ಅನುದಾನದಡಿ ಶೇ 5% ಮೊತ್ತ ರೂ 10 ಲಕ್ಷಗಳಿಗೆ ಫಲಾನುಭವಿಗಳ ಆಯ್ಕೆಗೆ ಅನುಮೋದನೆ ನೀಡಿದ್ದು, 2020-21 ನೇ ಸಾಲಿನ ಅನಿರ್ಬಂಧಿತ ಅನುದಾನದಲ್ಲಿ 2019 -20 ನೇ ಸಾಲಿನಲ್ಲಿ ಬಾಕಿ ಉಳಿದ ಕಾಮಗಾರಿಗಳಿಗೆ 1 ಕೋಟಿ ಮೀಸಲಿಟ್ಟು ಉಳಿದ ರೂ 50 ಲಕ್ಷಗಳ ಕ್ರಿಯಾ ಯೋಜನೆ, ಅನುಮೋದನೆ ಏಕ, ನಿವೇಶನ ವಿನ್ಯಾಸ ,ನಕ್ಷೆ ಅನುಮೋದನೆಗೆ ಇಲ್ಲಿ ಬಂದಿದ್ದು ಪ್ರಸ್ತಾವನೆಗಳಿಗೆ ಅನುಮೋದನೆ ನಿಡಲಾಯಿತು.ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಸುಂದರೇಶ್ ರವರು ಇಂದಿನ ಸಾಮಾನ್ಯ ಸಭೆಯಲ್ಲಿ ಎಲ್ಲರ ಸಹಮತದೊಂದಿಗೆ ಪ್ರಮುಖ ಮೂರು ಅನುದಾನಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು.ಬಳಿಕ ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಹಳೇ ಗ್ರಾಮ ಠಾಣಾ ಜಾಗದಲ್ಲಿರುವ ನೆಹರೂ ಸ್ಮಾರಕ ವಿದ್ಯಾ ಸಂಸ್ಥೆಗೆ ಕಟ್ಟಡ ಮತ್ತು ಆಟದ ಮೈದಾನಕ್ಕೆ ನಿವೇಶನ ನೀಡಿದ್ದಾರೆ ಇದು ನನ್ನ ಅವಧಿಯಲ್ಲಿ ಆಗಿಲ್ಲ ಈ ಹಿಂದೆ ಅಧ್ಯಕ್ಷರಾಗಿ ನಾಗೇಶ್ ಅವರ ಅವಧಿಯಲ್ಲಿ ನಡೆದಿರುವುದು ಇದ್ದನ್ನು ರದ್ದುಪಡಿಸಲು ನಮ್ಮಗೆ ಬರುವುದಿಲ್ಲ, ಸಾಮಾನ್ಯ ಸಭೆಯಲ್ಲಿ ಗದ್ದಲ ಸೃಷ್ಟಿಸದೆ ಅಭಿವೃದ್ಧಿಯತ್ತ ಮುಖ ಮಾಡಿ ಎಂದು ಸದಸ್ಯರಿಗೆ ತಿಳಿಸಿದರು.ಇನ್ನೂ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ಮಾದು ಇಒ ಸತೀಶ್ ಉಪಸ್ಥಿತರಿದ್ದರು .

ವರದಿ:ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version